ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-01

ಕೋಲಾರ, ಜು.16- ಕೆಲವು ತಿಂಗಳಿಂದ ಹತ್ತಾರು ಹಳ್ಳಿಗಳ ಜನರಿಗೆ ಉಪಟಳ ನೀಡಿ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸೆರೆಸಿಕ್ಕಿದೆ. ತಾಲೂಕಿನ ಅರಾಬಿ ಕೊತ್ತನೂರು ಬೆಟ್ಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಇದರಿಂದ ಸಾರ್ವಜನಿಕರಿಗೆ ಕೊಂಚ ನಿರಾಳವಾಗಿದೆ. ಬೋನಿಗೆ ಬಿದ್ದ ಚಿರತೆಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಸುತ್ತಲ ಹತ್ತಾರು ಹಳ್ಳಿಯ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಚಿರತೆ ವೀಕ್ಷಿಸಿ ನಿಟ್ಟುಸಿರುಬಿಟ್ಟರು.

ರೈತರು ತಮ್ಮ ಜಮೀನಿನಲ್ಲಿ ಕಟ್ಟಿದ್ದ ಕೆಲವು ಹಸು, ಮೇಕೆಗಳನ್ನು ಚಿರತೆ ತಿಂದಿದ್ದು, ಇತ್ತೀಚೆಗೆ ಒಬ್ಬ ವ್ಯಕ್ತಿಯನ್ನು ಕೊಂದುಹಾಕಿತ್ತು. ಇದರಿಂದ ಸುತ್ತಲ ಹಳ್ಳಿಯ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ಭಯ ಪಡುತ್ತಿದ್ದರು. ಈಗ ಚಿರತೆ ಸೆರೆ ಸಿಕ್ಕಿರುವುದರಿಂದ ಚಿಕ್ಕ ಅಯ್ಯೂರು, ದೊಡ್ಡ ಅಯ್ಯೂರು, ವೆಂಕಟಾಪುರ, ಗುಡ್ಡಪಲ್ಲಿ, ಮಡೇನಹಳ್ಳಿ ಮುಂತಾದ ಗ್ರಾಮಸ್ಥರಿಗೆ ನಿರಾಳವಾದಂತಾಗಿದೆ. ಸುಮಾರು ಆರು-ಏಳು ವರ್ಷದ ಚಿರತೆಯನ್ನು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin