ಜನ್ಮನೀಡಿ, ಪೋಷಿಸಿ, ಬೆಳಸಿದ ಪಾಕಿಸ್ತಾನವನ್ನೇ ನುಂಗಿಹಾಕುತ್ತಿರುವ ಭಯೋತ್ಪಾದನೆ ಭೂತ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism

ಜಿನಿವಾ/ನವದೆಹಲಿ, ಮಾ.2-ಭಾರತದ ವಿರುದ್ಧ ಭಯೋತ್ಪಾದನೆ ಸಂಘಟನೆಗಳನ್ನು ಪಾಕಿಸ್ತಾನ ಸೃಷ್ಟಿಸುತ್ತಿದೆ. ಈ ಭೂತ ಈಗ ತನ್ನದೇ ಆದ ಸೃಷ್ಟಿಕರ್ತನನ್ನು ಕಬಳಿಸುತ್ತಿದೆ ಎಂದು ಪಾಕ್ ವಿರುದ್ಧ ಭಾರತ ಬಿರುಸಿನ ವಾಗ್ದಾಳಿ ನಡೆಸಿದೆ.   ವಿಶ್ವಸಂಸ್ಥೆಯ ಮಾನವ ಹಕ್ಕುಗಳಗಳ 34ನೇ ಅಧಿವೇಶದಲ್ಲಿ ಪಾಕಿಸ್ತಾನದ ವಿರುದ್ಧ ವಾಕ್ ಪ್ರಹಾರ ನಡೆಸಲು ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಭಾರತದ ರಾಯಭಾರಿ ಮತ್ತು ಸಂಯುಕ್ತ ರಾಷ್ಟ್ರಗಳಿಗೆ ಖಾಯಂ ಪ್ರತಿನಿಧಿಯಾಗಿರುವ ಅನಿಲ್ ಕುಮಾರ್, ವಿಶ್ವಕ್ಕೆ ಅಗತ್ಯವಾಗಿ ಬೇಕಾಗಿರುವ ಕುಖ್ಯಾತ ಭಯೋತ್ಪಾದಕರಿಗೆ ಪಾಕ್ ಕಳೆದ ಎರಡು ದಶಕಗಳಿಂದ ನೆರವು ನೀಡಿ ಪೋಷಿಸುತ್ತ ಬಂದಿದೆ ಎಂದು ಕಟುವಾಗಿ ಟೀಕಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅತಿಕ್ರಮಣದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿತಿಯನ್ನು ಪಾಕಿಸ್ತಾನ ಅಸ್ಥಿರಗೊಳಿಸುತ್ತಿವೆ. ಮಾನವ ಹಕ್ಕುಗಳನ್ನು ತಡೆ ಹಿಡಿದಿರುವ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಬಿಂದು ಎಂಬುದು ಜಗಜ್ಜಾಹೀರಾಗಿದೆ ಎಂದು ಅನಿಲ್ ಕುಮಾರ್ ಆರೋಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin