ಜನ ಮೆಚ್ಚುಗೆ ಪಡೆದ ಡೆಫ್ ಫಿಲಂ ಫೆಸ್ಟಿವಲ್

ಈ ಸುದ್ದಿಯನ್ನು ಶೇರ್ ಮಾಡಿ

Film-Fest

ಬೆಂಗಳೂರು, ಡಿ.30- ಮೂಕ ಪ್ರತಿಭಾನ್ವಿತರನ್ನೊಳಗೊಂಡ ನಾಲ್ಕನೆ ಅಂತಾರಾಷ್ಟ್ರೀಯ ಡೆಫ್ ಫಿಲಂ ಫೆಸ್ಟಿವಲ್ ನಗರದಲ್ಲಿ ಯಶಸ್ವಿಯಾಗಿ ನಡೆದು ಜನಮೆಚ್ಚುಗೆ ಗಳಿಸಿತು. ಡಿ.28ರಿಂದ ಮೂರು ದಿನಗಳವರೆಗೆ ಜಯನಗರ 9ನೇ ಬ್ಲಾಕ್ ಜೈನ್ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ವಿಶೇಷ ಡೆಫ್ ಫಿಲಂ ಫೆಸ್ಟಿವಲ್‍ನಲ್ಲಿ ಭಾರತ, ಯೂರೋಪ್, ಜರ್ಮನಿ, ಸ್ಪೇನ್, ಯುಎಸ್‍ಎ ಸೇರಿದಂತೆ ಹಲವಾರು ದೇಶಗಳಿಂದ 70 ಕಿರುಚಿತ್ರಗಳು ಪ್ರದರ್ಶನಗೊಂಡವು. ಡೆಫ್ ಲೀಡರ್ ಆರ್ಗನೈಸೇಷನ್ ಅಧ್ಯಕ್ಷ ಮುರುಳಿ ಹಾಗೂ ಅವರ ಪತ್ನಿ ಸುಧಾ ಅವರು ಜೈನ್ ವಿಶ್ವವಿದ್ಯಾಲಯದ ಪ್ರೊ.ರಾಮಕೃಷ್ಣ ಅವರ ಸಹಕಾರದೊಂದಿಗೆ ನಾಲ್ಕನೇ ಅಂತಾರಾಷ್ಟ್ರೀಯ ಡೆಫ್ ಫಿಲಂ ಫೆಸ್ಟಿವಲ್‍ನನ್ನು ಯಶಸ್ವಿಯಾಗಿ ಮುನ್ನಡೆಸಿದರು.

Jagadish 1
ಮಾತು ಬಾರದ ಮುರುಳಿ ಅವರು ಮನದುಂಬಿ ಅಭಿವ್ಯಕ್ತಿಸುವುದನ್ನು ಅವರ ಪುತ್ರಿ ಸ್ನೇಹ ಜನರಿಗೆ ಮಾತಿನ ಮೂಲಕ ವಿವರಿಸುತ್ತಾರೆ. ಮೊದಲನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೆಹಲಿ, ಎರಡನೆಯದು ಮುಂಬೈ, ಮೂರನೆಯದು ಕೊಯಮತ್ತೂರು ಇದೀಗ ನಮ್ಮ ನಗರದಲ್ಲಿ ನಡೆದಿರುವುದು ವಿಶೇಷ. ಒಂದು ನಿಮಿಷ, 15 ಹಾಗೂ 30 ನಿಮಿಷದ 70 ಕಿರು ಸಿನಿಮಾಗಳು ಪ್ರದರ್ಶನಗೊಂಡಿದ್ದು, ನಾಲ್ಕು ಮಂದಿ ತೀರ್ಪುಗಾರರು ಬೆಸ್ಟ್ ಫಿಲಂಗಳನ್ನು ಆಯ್ಕೆ ಮಾಡಿದ್ದಾರೆ.

Jagadish 2

ಬೆಸ್ಟ್ ಫಿಲಂ ಪ್ರಶಸ್ತಿ ಪಡೆಯುವ ಮೂರು ಸಿನಿಮಾಗಳಿಗೆ ಪ್ರಥಮ 10ಸಾವಿರ, ದ್ವೀತಿಯ 5ಸಾವಿರ ಹಾಗೂ ತೃತೀಯ 3ಸಾವಿರ ರೂ. ನೀಡಲಾಗುತ್ತದೆ. ಅಲ್ಲದೆ, ಬೆಸ್ಟ್ ಸ್ಟೋರಿ, ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆ್ಯಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಕಾಸ್ಟ್ಯೂಮ್ ಸೇರಿದಂತೆ 26 ಕ್ಯಾಟಗರಿಯಲ್ಲಿ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ನಟ ಸಂಚಾರಿ ವಿಜಯ್, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಎ.ಆರ್.ಪ್ರಕಾಶ್, ಕೆಇಎಸ್‍ನ ಅಸಿಸ್ಟೆಂಟ್ ಕಮೀಷನರ್ ಎಚ್.ಕೆ.ಪದ್ಮನಾಭ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Jagadish 3

Facebook Comments

Sri Raghav

Admin