ಜಪಾನಿಸ್ ಎನ್ಸಿಫಾಲಿಟಿಸ್(ಜೆಇ) ಮಾರಕ ರೋಗ ಬಲಿಯಾದವರ ಸಂಖ್ಯೆ 39ಕ್ಕೇರಿಕೆ
ಭುವನೇಶ್ವರ, ಅ.9-ಓಡಿಶಾದ ಮಾಲ್ಕನ್ಗಿರಿ ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಜಪಾನಿಸ್ ಎನ್ಸಿಫಾಲಿಟಿಸ್(ಜೆಇ) ರೋಗಕ್ಕೆ ಬಲಿಯಾದವರ ಸಂಖ್ಯೆ 39ಕ್ಕೇರಿದೆ. ಈ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ 116 ಮಂದಿಗೆ ಈ ಸೋಂಕು ತಗುಲಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಭುವನೇಶ್ವರದಲ್ಲಿ ನಡೆದ ಪರಿಸ್ಥಿತಿ ಪರಾಮರ್ಶೆ ಸಭೆಯಲ್ಲಿ ಮಾತನಾಡಿದೆ ಆರೋಗ್ಯ ಸಚಿವ ಆತನು ಸವ್ಯಸಾಚಿ, ಮಾಲ್ಕನ್ಗಿರಿ ಜಿಲ್ಲೆಯ ವಿವಿಧೆಡೆ ಜಪಾನಿಸ್ ಎನ್ಸಿಫಾಲಿಟಿಸ್ ಸೋಂಕು ರೋಗದಿಂದ ಈವರೆಗೆ 39 ಮಂದಿ ಸಾವಿಗೀಡಾಗಿದ್ದಾರೆ. ಗ್ರಾಮಗಳಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
116 ಮಂದಿಗೆ ಸೋಂಕು ತಗುಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇತರ 25 ಜನರು ಗುಣಮುಖರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಹಂದಿಗಳಿಗೆ ಕಚ್ಚುವ ಸೊಳ್ಳೆಗಳು ಮನುಷ್ಯರಿಗೆ ಕಚ್ಚಿದಾಗ ಈ ರೋಗ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಂದ 2,400ಕ್ಕೂ ಹೆಚ್ಚು ಹಂದಿಗಳನ್ನು ಮಾಲ್ಕನ್ಗಿರಿ ಜಿಲ್ಲಾಡಳಿತ ಹೊರಗಿಟ್ಟಿದೆ.
► Follow us on – Facebook / Twitter / Google+