ಜಮೀನೊಂದರಲ್ಲಿ ಬೆಳೆದಿದ್ದ 2 ಲಕ್ಷ ಮೌಲ್ಯದ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

Marijuana

ಮಳವಳ್ಳಿ, ಅ.20- ಜಮೀನೊಂದರಲ್ಲಿ ಬೆಳೆದಿದ್ದ 2 ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ಡಿವೈಎಸ್‍ಪಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ತಾಲ್ಲೂಕಿನ ತಳಗವಾದಿ ಗ್ರಾಮದ ಕೆಂಚೇಗೌಡ ಎಂಬುವರು ತಮ್ಮ ಎರಡು ಗುಂಟೆ ಜಮೀನಿನಲ್ಲಿ ಈರೇಕಾಯಿ ಗಿಡಗಳ ಮಧ್ಯೆ ಗಾಂಜಾಗಿಡಗಳನ್ನು ಬೆಳೆದಿದ್ದರು. ಜಮೀನಿನ ಸುತ್ತ ತೆಂಗಿನ ಗರಿಗಳಿಂದ ಮುಚ್ಚಲಾಗಿತ್ತು.ಈ ವಿಷಯ ತಿಳಿದ ಡಿವೈಎಸ್‍ಪಿ ಥಾಮಸ್, ಸರ್ಕಲ್ ಇನ್ಸ್‍ಪೆಕ್ಟರ್ ರಮೇಶ್, ಪಿಎಸ್‍ಐ ರವಿಕುಮಾರ್ ಅವರ ನೇತೃತ್ವದಲ್ಲಿ ನಿನ್ನೆ ಸಂಜೆ ದಾಳಿ ಮಾಡಿ ಗಾಂಜಾಗಿಡಗಳನ್ನು ವಶಪಡಿಸಿಕೊಂಡು ಕೆಂಚೇಗೌಡ ಅವರನ್ನು ಜೆಎಂಎಫ್‍ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin