ಜಮ್ಮು : ಅಗ್ನಿ ದುರಂತದಲ್ಲಿ 5 ಬಸ್ ಸಂಪೂರ್ಣ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Bus-Fire

ಜಮ್ಮು,ನ.11– ಇಲ್ಲಿನ ಉಗ್ರಾಣ ಪ್ರದೇಶದ ಬಸ್ ನಿಲ್ದಾಣದಲ್ಲಿ ತಡರಾತ್ರಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಐದು ಬಸ್‍ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಈ ದುರಂತದ ನಂತರ ಈ ಪ್ರದೇಶದಲ್ಲಿದ್ದ ಸುಮಾರು 25 ಬಸ್‍ಗಳನ್ನು ಸುರಕ್ಷತಾ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಲಾಗಿದೆ.  ಭೀಕರ ಬೆಂಕಿಯಿಂದಾಗಿ ಐದು ಬಸ್‍ಗಳು ಸಂಪೂರ್ಣ ಭಸ್ಮವಾಗಿದೆ ಎಂದು ಪೊಲೀಸ್ ಪೋಸ್ಟ್ ವೇರ್‍ಹೌಸ್‍ನ ಮೇಲ್ವಿಚಾರಕ ಕುನಾಲ್ ಜಾಮ್‍ವಾಲ ಹೇಳಿದ್ದಾರೆ.  ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು.

► Follow us on –  Facebook / Twitter  / Google+

Facebook Comments

Sri Raghav

Admin