ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಸಚಿವರ ಮನೆ ಮೇಲೆ ಉಗ್ರರ ದಾಳಿ, ಇಬ್ಬರು ಪೊಲೀಸರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Jammu-Kahsmir--01

ಶ್ರೀನಗರ, ಮಾ.27-ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಪಿಡಿಪಿ ನಾಯಕ ಮತ್ತು ಸಚಿವ ಫಾರೂಕ್ ಅಬ್‍ದ್ರಬಿ ಅವರ ನಿವಾಸದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.   ಅನಂತ್‍ನಾಗ್ ಜಿಲ್ಲೆಯ ದೂರು ಪ್ರದೇಶದಲ್ಲಿರುವ ಹಜ್ ಸಚಿವ ಫಾರೂಕ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಗಾರ್ಡ್ ಕೊಠಡಿಯಲ್ಲಿದ್ದ ನಾಲ್ಕು ಸರ್ವಿಸ್ ರೈಫಲ್‍ಗಳನ್ನು ಅಪಹರಿಸಿದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದರು. ಇದರಿಂದ ಇಬ್ಬರು ಪೇದೆಗಳಿಗೆ ಗಾಯಗಳಾಗಿವೆ. ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಹತ್ತಿರದ ಸಂಬಂಧಿಯಾದ ಫಾರೂಕ್ ಈ ದಾಳಿ ನಡೆದಾಗ ಮನೆಯಲ್ಲಿ ಇರಲಿಲಲ್ಲ. ಭಯೋತ್ಪಾದಕರ ದಾಳಿ ವೇಳೆ ಸಚಿವರ ಸಂಬಂಧಿಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin