ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು. ಸೆ. 21- ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ತಿಳಿಯುವುದು ಅಗತ್ಯವಾಗಿದೆ ಎಂದು ಖ್ಯಾತ ವಕೀಲ, ಚಿಂತಕ ಕಿರಣ್ ಬೆಟ್ಟದಪುರ ತಿಳಿಸಿದರು.ನಗರದಲ್ಲಿ ಮಂಥನ ವೈಚಾರಿಕ ವೇದಿಕೆ ಜಮ್ಮು-ಕಾಶ್ಮೀರ ಹಾಗೂ ಬಲೂಚಿಸ್ಥಾನದ ವರ್ತಮಾನದ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದು ಸಂಪ್ರದಾಯದಲ್ಲಿ ಸ್ವರ್ಗದ ಉಲ್ಲೇಖವನ್ನು ನಾಲೆಲ್ಲರೂ ಕೇಳಿದ್ದೇವೆ ಆದರೆ ಯಾರೂ ಸಹ ಕಣ್ಣಾರೆ ಕಂಡಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದ ಹವಾಮಾನವನ್ನು ನೆನಪಿಸಿಕೊಂಡು ಸ್ವರ್ಗ ಎಂದರೆ ಹೀಗೇಯೇ ಇರುತ್ತದೆ ಎನ್ನುವಂತಹ ಕಲ್ಪನೆಗಳು ಅನೇಕರ ಮನದಲ್ಲಿ ಮೂಡುತ್ತವೆ. ಆದರೆ ಆ ಸ್ವರ್ಗದ ನಾಡಿನಲ್ಲಿ ನಡೆಯುವಂತಹ ರಕ್ತಪಾತಗಳು ಒಂದು ಕ್ಷಣ ಎಲ್ಲರ ಮನಸ್ಸನ್ನು ಬೆಚ್ಚಿ ಬೀಳಿಸಿ ಬಿಡುತ್ತದೆ ಎಂದರು.

ಈ ಭೂಮಿ ಅತ್ಯಂತ ಸ್ಪುರದ್ರೂಪಿ ಜನಾಂಗದಲ್ಲಿ ಒಂದಾದ ಪಂಡಿತ್ ಸಮುದಾಯ ದಶಕಗಳ ಹಿಂದಿನಿಂದಲೂ ಅಲ್ಲಿಯೇ ನೆಲೆಸಿದ್ದರು. ಕಾಶ್ಮೀರಿ ಪಂಡಿತ ಜೊತೆಯಲ್ಲಿ ಮುಸಲ್ಮಾನ್ ಬಾಂಧವರು ಸಹ ಸ್ವಾತಂತ್ರ ಪೂರ್ವದಿಂದಲೂ ಜೀವಿಸುತ್ತಾ ಬಂದಂತಹವರು, ಯಾರೋ ಕೆಲ ಕಿಡಿಗೇಡಿಗಳ ಮಾತಿಗೆ ತಮ್ಮ ಜೀವನ ಪ್ರವೃತ್ತಿಯನ್ನೇ ಬದಲಿಸಿಕೊಂಡು ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸೇರಿ ಪ್ರತ್ಯೇಕತೇಯ ಕೂಗನ್ನು ಎಬ್ಬಿಸಿ ನಾಡಿನಾದ್ಯಂತ ಅಶಾಂತಿಯನ್ನು ಉಂಟುಮಾಡಿ ಸ್ಥಳೀಯರನ್ನು ಭಯಗೊಳಿಸುವ ಪ್ರವೃತ್ತಿಗಿಳಿದಾಗ ಎಂತಹವರಿಗೂ ಎದೆಯಲ್ಲಿ ನಡುಕ ಉಂಟಾಗುತ್ತದೆ. ಸೈನಿಕರ ಕಾವಲಿನಲ್ಲಿಯೂ ಇಂತಹ ಕೃತ್ಯಗಳು ನಡೆಯುತ್ತವೆ ಎಂದರೆ ಅಲ್ಲಿನ ಕೆಲ ಸ್ಥಳೀಯರ ಕುಮ್ಮಕ್ಕು ಅದಕ್ಕೆ ಸಾಕ್ಷಿಯಾಗುತ್ತದೆ. ದೇಶದ ಸೈನಿಕರಿಗೆ ಆದೇಶ ನೀಡಿದರೆ ಉಗ್ರರನ್ನು ಚೆಂಡಾಡಿ ಬಿಡುವಂತಹ ಶಕ್ತಿ, ಸಾಮಾಥ್ರ್ಯವನ್ನು ಹೊಂದಿದ್ದಾರೆ. ಸ್ಥಳೀಯರ ಬೆಂಬಲವೇ ಇಲ್ಲದೇ ಏನೂ ಮಾಡಲಾಗದು ಎಂದರು.

ಮಂಥನ ವಯಚಾರಿಕ ವೇದಿಕೆಯ ಸಂಚಾಲಕ ಡಿ.ಆರ್.ಶ್ರೀಧರ್‍ಮೂರ್ತಿ ಮಾತನಾಡಿ ದೇಶಕ್ಕಾಗಿ ದುಡಿಯುವಂತಹ ಸೌನಿಕರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.ಕಾರ್ಯಕ್ರಮದ ಪ್ರಾರಂಭಕ್ಕೂ ಮುಂಚಿತವಾಗಿ ದೇಶಕ್ಕಾಗಿ ಹುತಾತ್ಮರಾದಂತಹ ಸೈನಿಕರಿಗೆ ಒಂದು ನಿಮಿಷ ಮೌನವಾಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಮಂಥನ ವೈಚಾರಿಕ ವೇದಿಕೆಯ ಸದಸ್ಯರುಗಳಾದ ರಂಗಾಪುರ ನಾಗೇಶ್, ಮನೋಹರ್, ನಟರಾಜು, ಮಂಜುನಾಥ್, ಆನಂದ್, ಕಾರ್ತೀಕ್, ಜೆಡಿಎಸ್ ಮುಖಂಡ ಲೋಕೇಶ್ವರ, ವಕೀಲರ ಸಂಘದ ಅಧ್ಯಕ್ಷ ಬಸಪ್ಪ, ಚಾಮುಂಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ಪ್ರೊ .ಜಗದೀಶ್ ಮತ್ತಿತರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin