ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಪ್ರದೇಶದಿಂದ ಪಾಕ್ ಹಿಂದೆ ಸರಿಯಲಿ

ಈ ಸುದ್ದಿಯನ್ನು ಶೇರ್ ಮಾಡಿ

Kashmir-01

ಡಲ್ಲಾಸ್(ಅಮೆರಿಕ), ಆ.13-ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವಾದ ಗಿಲ್‍ಬಿಟ್ ಬಲ್ಟಿಸ್ತಾನವನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನ ಆ ಪ್ರದೇಶದಿಂದ ಹಿಂದಕ್ಕೆ ಸರಿಯಬೇಕು ಎಂದು ಅಮೆರಿಕ ಮೂಲದ ಸಂಘಟನೆಯೊಂದು ಒತ್ತಾಯಿಸಿದೆ. ಇದರಿಂದ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎಂದು ಅದು ಹೇಳಿದೆ.  ಗಿಲ್‍ಬಿಟ್-ಬಲ್ಟಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಕು ಚೆಲ್ಲಿರುವುದು ಒಂದು ಸಕಾರಾತ್ಮಕ ಹೆಜ್ಜೆ ಎಂದು ವಾಷಿಂಗ್ಟನ್ ಡಿಸಿ ಮೂಲದ ಗಿಲ್‍ಬಿಟ್-ಬಲ್ಟಿಸಾನ್ ನ್ಯಾಷನಲ್ ಕಾಂಗ್ರೆಸ್ ನಿರ್ದೇಶಕ ಸೆನ್‍ಗೆ ಸೆರಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.
ಗಿಲ್‍ಬಿಟ್-ಬಲ್ಟಿಸ್ತಾನದಲ್ಲಿ ಪಾಕಿಸ್ತಾನ ಅತಿಕ್ರಮಣ ಮಾಡಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ನಿರ್ಣಯಗಳ ಮೂಲಕ ಈಗಾಗಲೇ ಘೋಷಿಸಿದೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.  ಈ ಪ್ರದೇಶವನ್ನು ಪಾಕಿಸ್ತಾನ ಆಕ್ರಮಣ ಮಾಡಿಕೊಂಡಿದೆ ಎಂಬುದನ್ನು ಭಾರತ ಮತ್ತು ಪಾಕ್‍ನ ನೆರೆಹೊರೆ ದೇಶಗಳೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಆ ದೇಶಕ್ಕೆ ಮತ್ತೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಕೋರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin