ಜಯಂತಿನಗರದಲ್ಲಿ ಜಯಲಲಿತ ಪ್ರತಿಕೃತಿ ದಹನ

ಈ ಸುದ್ದಿಯನ್ನು ಶೇರ್ ಮಾಡಿ

pandavapura

ಪಾಂಡವಪುರ, ಸೆ.8– ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ತಾಲ್ಲೂಕಿನ ಜಯಂತಿನಗರ ಗ್ರಾಮಸ್ಥರು ಮೈಸೂರು ಶಿವಮೊಗ್ಗ ಹೆದ್ದಾರಿ ಬಂದ್ ಮಾಡಿ ಜಯಲಲಿತ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ಮಧ್ಯೆ ಭಾರಿಗಾತ್ರದ ಮರ ಮತ್ತು ಟೈರ್ ಗಳನ್ನು ಹಾಕಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ರಸ್ತೆಯಲ್ಲಿ ನೂರಾರು ವಾಹನಗಳು ನಿಂತು ಸಂಚಾರಕ್ಕೆ ತೀವ್ರ ಆಡಚಣೆ ಉಂಟಾಯಿತು. ಸರಕು ತುಂಬಿದ ಹಲವಾರು ಲಾರಿಗಳು ರಸ್ತೆಯಲ್ಲಿ ನಿಲ್ಲಬೇಕಾಯಿತು. ನಂತರ ಪ್ರತಿಭಟನಾಕಾರರು ಜಯಲಲಿತ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿ ದಹಿಸಿದರು.ಪ್ರತಿಭಟನೆಯಲ್ಲಿ ಗ್ರಾಮದ ರವಿ, ಮಣಿ, ರಂಗನಾಥ, ಕುಮಾರ, ಪಟೇಲ, ಆಂಟಿರವಿ, ನವೀನ, ಸ್ವಾಮಿ, ಮಧು, ಚಲುವೇಗೌಡ, ಪಾಂಡು ಸೇರಿದಂತೆ ಹಲವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin