ಜಯನಗರ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಸರಗಳ್ಳ, 9 ಚಿನ್ನದ ಚೈನ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

chain--01

ಬೆಂಗಳೂರು, ಏ.17- ಹಣದ ಆಸೆಗೆ ತನ್ನ ಸಹಚರರೊಂದಿಗೆ ಸೇರಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಸರಗಳ್ಳನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು , 10, 09,000 ರೂ.ಬೆಲೆಯ 326 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರ, ಎನ್.ಆರ್.ಐ ಲೇ ಔಟ್ ನಿವಾಸಿ ಸುಹೇಲ್ ಪಾಷಾ ಅಲಿಯಾಸ್ ಕಾಣ (23) ಬಂಧಿತ ಆರೋಪಿ. ಈತ ಈ ಹಿಂದೆ ಮೈಸೂರು ನಗರದ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಬೆಂಗಳೂರಿನ ರಾಮಮೂರ್ತಿನಗರ, ಹೆಣ್ಣೂರು , ಬಾಣಸವಾಡಿ, ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮತ್ತು ಮೊಬೈಲ್ ಕಳವು ಪ್ರಕರಣಗಳಲ್ಲಿ ಬಂಧಿತನಾಗಿ ಇತ್ತೀಚೆಗೆ ಜಾಮೀ ನಿನ ಮೇಲೆ ಬಿಡುಗಡೆ ಯಾಗಿದ್ದ.

ನಂತರ ಆಟೋ ಓಡಿಸಿಕೊಂಡಿದ್ದ ಈತ ಹಣದ ಆಸೆಗೆ ಬಿದ್ದು ತನ್ನ ಸಹಚರ ಇಮ್ರಾನ್ ಅಲಿಯಾಸ್ ಬಚನ್ ಎಂಬಾತನೊಂದಿಗೆ ಸೇರಿ ಮತ್ತೆ ಸರಗಳ್ಳತನ ಮಾಡುವುದನ್ನು ಮುಂದುವರೆಸಿದ್ದ.  ಸುಹೇಲ್ ಪಾಷನ ಬಂಧನದಿಂದ ಜೆ.ಪಿ.ನಗರ ಠಾಣೆಯ ಎರಡು , ಬನಶಂಕರಿ ಠಾಣೆಯ ಎರಡು , ಜಯನಗರ , ಕೆ.ಎಸ್.ಲೇ ಔಟ್ ಹಾಗೂ ಗಿರಿ ನಗರ ಠಾಣೆಯ ತಲಾ ಒಂದು ಸೇರಿ ಒಟ್ಟು 7 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ.

ಬಂಧಿತನಿಂದ 10, 09,000 ರೂ. ಬೆಲೆ ಬಾಳುವ 326 ಗ್ರಾಂ ತೂಕದ 9 ಚಿನ್ನದ ಚೈನುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಅಪಾಚೆ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಎಚ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜೆ.ಪಿ ನಗರ ಠಾಣೆಯ ಇನ್ಸ್‍ಪೆಕ್ಟರ್ ಎಂ.ಎಸ್. ಹಿತೇಂದ್ರ , ಪಿಎಸ್‍ಐ ಕುಮಾರಸ್ವಾಮಿ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin