ಜಯಮೃತ್ಯುಂಜಯಶ್ರೀ ಹೇಳಿಕೆ ಸಮರ್ಥಿಸಿದ ಸಚಿವ ಪಾಟೀಲ್‍ಗೆ ಶಿವಶಂಕರಪ್ಪ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ssppaa
ದಾವಣಗೆರೆ,ನ.07- ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಆದ್ದರಿಂದಲೇ ಅವರು ಲಿಂಗಾಯಿತರು-ವೀರಶೈವರ ಕುರಿತು ಅಸಭ್ಯವಾಗಿ ನೀಡಿರುವ ಶ್ರೀಬಸವ ಜಯಮೃತ್ಯುಂಜಯಸ್ವಾಮಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಮೃತ್ಯುಂಜಯಶ್ರೀಗಳ ಹೇಳಿಕೆ ತೀರಾ ಅತಿರೇಕದ್ದಾಗಿದ್ದು, ಮತ್ತೆ ಅದನ್ನು ತಿರುಚಿ ಮಾಧ್ಯಮಗಳಿಗೆ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಸ್ವಾಮಿಗಳೇ ಆಗಲಿ, ಸಚಿವರೇ ಆಗಲಿ ಮಾತನಾಡುವ ಮುನ್ನ ಸ್ವಲ್ಪ ಆಲೋಚಿಸಿ, ಸಂಯಮದಿಂದ ಮಾತನಾಡಿದ್ದರೆ ಈ ವಿಷಯ ಹೀಗೆ ರಾದ್ಧಾಂತಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಜಯಮೃತ್ಯುಂಜಯಸ್ವಾಮಿಗಳ ಇತಿಹಾಸ ಬಹಳ ದೊಡ್ಡದಿದೆ. ಅದು ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಶಿವಶಂಕರಪ್ಪ ಬಾಂಬ್ ಸಿಡಿಸಿದರು.

ಈ ಎಲ್ಲಾ ವಿಷಯಗಳೂ ಮುಂದೆ ಸಾರ್ವಜನಿಕರಿಗೆ ಗೊತ್ತಾಗಲಿವೆ. ಇಂಥ ಸ್ವಾಮಿಗಳು ಇನ್ನೆಂಥಾ ಹೇಳಿಕೆಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಮಾಜಿ ಸಚಿವರು,ಲಿಂಗಾಯಿತ ಸಮಾವೇಶಕ್ಕೆ ಕೇವಲ ಲಿಂಗಾಯಿತರಷ್ಟೇ ಅಲ್ಲದೆ ಎಲ್ಲ ಸಮುದಾಯದವರೂ ಬಂದಿದ್ದರು ಎಂದು ಹೇಳಿದರು. ನಾಳೆ (ನ.8) ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇತ್ತೀಚೆಗೆ ನಡೆದ ಲಿಂಗಾಯಿತ ಸಮಾವೇಶದಲ್ಲಿ ಶ್ರೀಜಯಮೃತ್ಯುಂಜಯಸ್ವಾಮಿಗಳು, ಲಿಂಗಾಯಿತರು ಒಬ್ಬ ತಂದೆಯ ಮಕ್ಕಳು, ವೀರಶೈವರು ಐವರು ಅಪ್ಪಂದಿರ ಮಕ್ಕಳು ಎಂದು ಹೇಳಿಕೆ ನೀಡಿ, ನಂತರ ಅವರ ವಿರುದ್ಧ ಜನ ಸಿಡಿದೆದ್ದಾಗ ವಿಷಾದಿಸಿದ್ದರು. ಪುನಃ ಈ ಕುರಿತಂತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಜಯಮೃತ್ಯುಂಜಯಶ್ರೀಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

Facebook Comments

Sri Raghav

Admin