ಜಯಲಲಿತಾ ಪುತ್ರಿ ಮಂಜುಳಾ ಬೆಳಕಿಗೆ ಬಾರದಂತೆ ನಡೆದಿತ್ತು ಭಾರಿ ಷಡ್ಯಂತ್ರ..! (Exclusive)

ಈ ಸುದ್ದಿಯನ್ನು ಶೇರ್ ಮಾಡಿ

Jayalalita--Manjula

ನವದೆಹಲಿ, ಆ.28-ತಮಿಳುನಾಡಿನ ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಖಾಸಾ ಮಗಳು ನಾನೇ ಎಂದು ಮಂಜುಳಾ/ ಅಮೃತಾ/ ಅಮ್ಮು ಎನ್ನುವವರು ಪ್ರತಿಪಾದಿಸುವ ಮೂಲಕ ಜಯಾ ಅವರ ಬದುಕಿನ ರಹಸ್ಯ ಹೊಸದೊಂದು ತಿರುವು ಪಡೆದುಕೊಂಡಂತಾಗಿದೆ.  ನಾನು ಜಯಲಲಿತಾ ಮತ್ತು ತೆಲುಗು ಸೂಪರ್ ಸ್ಟಾರ್ ದಿ.ಶೋಭನ್‍ಬಾಬು ಅವರ ಪುತ್ರಿಯಾಗಿದ್ದು, ಈ ರಹಸ್ಯವನ್ನು ನನ್ನ ಸ್ವಂತ ತಾಯಿ ಜೆ.ಜಯಲಲಿತಾ ಅವರು ಅತ್ಯಂತ ರಹಸ್ಯವಾಗಿ ಕೊನೆಯವರೆಗೂ ಕಾಪಾಡಿಕೊಂಡು ಹೋದರು. ಆದರೆ ಅವರ ಆಪ್ತ ವಲಯದಲ್ಲಿದ್ದ ಕೆಲವು ಚಾಣಾಕ್ಷ ಸ್ವಾರ್ಥಿಗಳು ನಾನು ಅವರ ಮಗಳು ಎಂಬುದನ್ನು ಅದು ಹೇಗೋ ಖಾತ್ರಿಪಡಿಸಿಕೊಂಡಿದ್ದರು. [ BREAKING > ಬಂತು ನೋಡಿ ಜಯಲಲಿತಾಗೆ ಸಂಬಂಧಿಸಿದ ಶಾಕಿಂಗ್ ಸುದ್ದಿ…! (Exclusive) ]

ಈ ಹಿನ್ನೆಲೆಯಲ್ಲಿಯೇ ಜೆ.ಜಯಲಲಿತಾ ಅವರು 2016ರ ಡಿಸೆಂಬರ್ 5 ರಂದು ವಿಧಿವಶರಾದ ಸಂದರ್ಭ ಬೆಂಗಳೂರಿನಲ್ಲಿ ನಾನು ಇರುವ ಬಗ್ಗೆ ಪತ್ತೆ ಹಚ್ಚಿದ ಕೆಲವು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳು ನನ್ನ ಸಂದರ್ಶನ ನಡೆಸಿದರು. ಇದು ತಿಳಿದ ತಕ್ಷಣ ನನ್ನ ತಾಯಿ ಜಯಲಲಿತಾರ ಪರಮಾಪ್ತರೆನಿಸಿದ ಕೆಲವರು ಈ ಸುದ್ದಿ ಮತ್ತು ನನ್ನ ಅಸ್ತಿತ್ವ ಪ್ರಕಟವಾಗಿ ಸಾರ್ವಜನಿಕರ ಗಮನಕ್ಕೆ ಬಾರದಂತೆ ಮಾಧ್ಯಮದವರಿಗೆ ಆಮಿಷ ಮತ್ತು ಬೆದರಿಕೆವೊಡ್ಡಿ ಅದನ್ನು ಡಿಲಿಟ್ ಮಾಡಿಸುವಲ್ಲಿ ಯಶಸ್ವಿಯಾದರು. ಈ ಎಲ್ಲಾ ವಿಷಯಗಳ ಬಗ್ಗೆಯೂ ನನ್ನ ಬಳಿ ಸಾಕ್ಷಿ ಇದ್ದು, ಸಂದರ್ಭ ಬಂದಾಗ ಅದನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಅವರು ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಯಾರು ಈ ಮಂಜುಳಾ…?

ಕನ್ನಡತಿ, ತಮಿಳಿಗರ ಮನೆ ದೇವತೆ ಜಯಲಲಿತಾ ತಮ್ಮ ಔರಸ ಪುತ್ರಿಯ ರಕ್ಷಣೆಗಾಗಿ ತಾನು ತಾಯಿ ಎಂಬುದನ್ನು ಕೊನೆಯವರೆಗೂ ರಹಸ್ಯವಾಗಿಯೇ ಉಳಿಸಿಬಿಟ್ಟರೇ? ಹೌದು. ಜಯಾ ತಮಿಳಿಗರ ಅಮ್ಮನಷ್ಟೇ ಅಲ್ಲ, ಸ್ವತಃ ತನ್ನ ಮಗಳ ತಾಯಿಯೂ ಹೌದು. ತಮಿಳರ ರಕ್ಷಣೆಗಾಗಿ ಮತ್ತು ಮಗಳ ಹಿತಕ್ಕಾಗಿ ಅದನ್ನು ಗೌಪ್ಯವಾಗಿಟ್ಟಿದ್ದೂ ಹೌದು…

ಈ ಪ್ರಶ್ನೆಗಳಿಗೆ ಧನಾತ್ಮಕವಾಗಿ ಉತ್ತರ ನೀಡಿದ್ದಾರೆ ಜಯಾ ಪುತ್ರಿ ತಾನೆಂದು ಹೇಳುತ್ತಿರುವ ಮಂಜುಳಾ ಅಲಿಯಾಸ್ ಅಮೃತಾ ಅಲಿಯಾಸ್ ಅಮ್ಮು. ಪ್ರಸ್ತುತ ಅಮೃತಾ ಬೆಂಗಳೂರಿನಲ್ಲೇ ವಾಸ್ತವ್ಯವಿದ್ದು, ತಮ್ಮ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.  ತಮ್ಮ ಹಾಗೂ ಜಯಲಲಿತಾ ನಡುವಿನ ತಾಯಿ-ಮಗಳ ಬಾಂಧವ್ಯವನ್ನು ಅವರು ಹಂಚಿಕೊಂಡಿದ್ದಾರೆ…  ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. 1960-70ರ ದಶಕದಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದ್ದವರು ಸಂಧ್ಯಾ. ಆ ಕಾಲಕ್ಕೆ ನಟಿಯಾಗಿ ಹೆಸರುವಾಸಿ. ಇವರ ಪತಿ ಜಯರಾಂ. ಈ ದಂಪತಿಗೆ ಮೂವರು ಮಕ್ಕಳು- ಜಯಕುಮಾರ್, ಶೈಲಜಾ, ಜಯಲಲಿತಾ ಅಲಿಯಾಸ್ ಕೋಮಲವಲ್ಲಿ.

ಜಯಲಲಿತಾ ಅಲಿಯಾಸ್ ಕೋಮಲವಲ್ಲಿ ಅವರ ಮಗಳೇ ಮಂಜುಳಾ(ಅಮೃತಾ). ಅದೊಂದು ಸುಖೀ ಕುಟುಂಬವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಂಧ್ಯಾ ಅವರು ವಿಧಿವಶರಾಗಿಬಿಟ್ಟರು. ಆಗ ಈ ಮೂವರು ಮಕ್ಕಳು ಅಕ್ಷರಶಃ ಅನಾಥರಾದರು.  ಸೂಕ್ಷ್ಮ ಸ್ವಭಾವದ ಜಯಲಲಿತಾ ತೀರಾ ಮಾನಸಿಕವಾಗಿ ಕುಗ್ಗಿಹೋದರು. ಖಿನ್ನತೆಗೂ ಒಳಗಾದರು. ಈ ಸಂದರ್ಭದಲ್ಲೇ ಅವರಿಗೆ ರಾಜಕೀಯ ಗುರು, ತಮಿಳರ ಆರಾಧ್ಯ ದೈವ ಎಂ.ಜಿ.ಆರ್ ಪರಿಚಯವಾಯಿತು. ಅವರು ಜಯಾಗೆ ರಾಜಕೀಯ ಗುರುವಾಗಿದ್ದರೆ ಹೊರತು, ಕಷ್ಟ-ಸುಖ ಹಂಚಿಕೊಳ್ಳುವ ಆತ್ಮೀಯತೆ ಬೆಳೆದಿರಲಿಲ್ಲ. ಈ ವೇಳೆ ಜಯಾ ಅವರ ದುಃಖದಲ್ಲಿ ಭಾಗಿಯಾಗಿ, ಅನುಕಂಪ, ಪ್ರೀತಿಯಿಂದ ಅವರ ಬಗ್ಗೆ ಕಾಳಜಿ ವಹಿಸಿದವರು ಆಗ ತೆಲುಗಿನ ಸೂಪರ್‍ಸ್ಟಾರ್ ಆಗಿದ್ದ ಶೋಭನ್‍ಬಾಬು.

ಶೋಭನ್‍ಬಾಬು ಸಾಂಗತ್ಯದಲ್ಲಿ ಜಯಾ ಮಾಮೂಲಿನಂತಾದರು. ಇವರಿಬ್ಬರ ಸ್ನೇಹದ ಫಲವಾಗಿ ಇವರಿಬ್ಬರೂ ನಟಿಸಿದ ಅನೇಕ ಚಿತ್ರಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾದವು, ಯಶಸ್ವಿಯೂ ಆದರು.  ಒಂದು ಹಂತದಲ್ಲಿ ಇವರಿಬ್ಬರ ಸ್ನೇಹ ಪ್ರೀತಿಯ ಸ್ವರೂಪ ಪಡೆಯುತ್ತದೆ. ಈ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವಾಗಲೇ ಜಯಲಲಿತಾ ಗರ್ಭಿಣಿಯೂ ಆಗಿದ್ದಾಯಿತು. ಇದರಿಂದ ಕಂಗಾಲಾದ ಜಯಲಲಿತಾ, ಶೋಭನ್‍ಬಾಬು ಜೊತೆ ಮದುವೆ ಪ್ರಸ್ತಾಪ ಮಾಡುತ್ತಾರೆ. ಅವರೂ ಇದಕ್ಕೆ ಒಪ್ಪುತ್ತಾರೆ. ಮದುವೆ ಸಿದ್ಧತೆಗಳು ನಡೆಯುತ್ತವೆ. ಆದರೆ ಶೋಭನ್‍ಬಾಬು ಅವರ ಮೊದಲ ಪತ್ನಿ ಈ ಮದುವೆಗೆ ಅನುಮತಿ ನೀಡುವುದಿಲ್ಲ. ಮದುವೆ ಪ್ರಸ್ತಾಪ, ಪ್ರಸ್ತಾಪವಾಗಿಯೇ ಉಳಿದುಬಿಟ್ಟಿತು.

ಚೆನ್ನೈನ ಮೈಲಾಪುರದಲ್ಲಿ ವಾಸ್ತವ್ಯವಿದ್ದಾಗ ಜಯಲಲಿತಾಗೆ ಒಂದು ಹೆಣ್ಣು ಮಗುವಾಗುತ್ತದೆ. ಅದರ ಹೆಸರು ಮಂಜುಳಾ ಅಲಿಯಾಸ್ ಅಮೃತಾ. ಈ ವಿಷಯ ಎಷ್ಟು ರಹಸ್ಯವಾಗಿತ್ತೆಂದರೆ ಕೊನೆಗೂ ಅಮೃತಾಗೆ ನನ್ನ ಹೆತ್ತ ತಾಯಿ ಯಾರು ಎಂಬುದು ಗೊತ್ತಾಗಲೇ ಇಲ್ಲ. ಆದರೆ ಜಯಾಗೆ ಮಾತ್ರ ಮಗಳ ಮೇಲಿನ ಮಮತೆ, ವಾತ್ಸಲ್ಯಗಳು ಕಡಿಮೆಯಾಗಿರಲಿಲ್ಲ. ಆದರೆ ಈ ವಿಷಯ ಸಾರ್ವತ್ರಿಕವಾದರೆ ತನ್ನನ್ನು ನಂಬಿರುವ ತಮಿಳರಿಗೆ ಹಾಗೂ ತನ್ನ ಮುದ್ದಿನ ಮಗಳಿಗೆ ಎಲ್ಲಿ, ಯಾರಿಂದ, ಯಾವ ತೊಂದರೆ ಆಗುತ್ತದೆಯೋ ಎಂದು ಹೆದರಿ ಜಯಲಲಿತಾ ಇದನ್ನು ಅತ್ಯಂತ ಗೌಪ್ಯವಾಗಿಯೇ ಉಳಿಸಿದ್ದರು. ಈ ಗೌಪ್ಯತೆ ಜಯಾರ ಜೊತೆ ಸಮಾಧಿ ಸೇರಿಬಿಟ್ಟಿತು.

ಇದು ಸ್ಫೋಟಗೊಂಡದ್ದು ಹೇಗೆ?

ಸುದ್ದಿವಾಹಿನಿಯೊಂದರಲ್ಲಿ ಅಮೃತಾ ಅವರನ್ನು ನೋಡಿ ಅಮೆರಿಕದಲ್ಲಿದ್ದ ರಜನಿನಾಥ್ ಎಂಬುವರು ಗುರುತಿಸಿ, ನೀನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮಗಳು ಎಂದು ಹೇಳಿದರು. ಆಗಷ್ಟೇ ಮಂಜುಳಾರಿಗೆ ತನ್ನ ತಾಯಿಯ ಹೆಸರು ಕಿವಿಯ ಮೇಲೆ ಬಿದ್ದದ್ದು.  ಆದಾದ ನಂತರ ಒಮ್ಮೆ ಸಂಬಂಧಿ ಜಯಲಕ್ಷ್ಮಿ ಎಂಬುವರು ಅಮೃತಾಳಿಗೆ ಒಂದುಪತ್ರ ಬರೆದುಕೊಟ್ಟು, ಇದನ್ನು ತೆಗೆದುಕೊಂಡು ಹೋಗಿ ಚೆನ್ನೈನಲ್ಲಿರುವ ಜಯಲಲಿತಾ ಅವರಿಗೆ ಕೊಡು ಎಂದು ಕಳುಹಿಸಿದ್ದರು. ಪತ್ರ ಹಿಡಿದು ಮನೆ ಬಾಗಿಲಿಗೆ ಬಂದ ಮಗಳನ್ನು ಜಯಲಲಿತಾ ಮಾತೃ ವಾತ್ಸಲ್ಯದಿಂದ ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಸುಮಾರು 2-3 ತಿಂಗಳು ಮನೆಯಲ್ಲೇ ಇರಿಸಿಕೊಂಡು ನಂತರ ಕಳುಹಿಸಿಕೊಟ್ಟರು.

ಹೈದರಾಬಾದ್, ಊಟಿ ಹಾಗೂ ಚೈನ್ನೈನ ಸಿರಿದಾವೂರ್‍ಗಳಲ್ಲಿರುವ ತಮ್ಮ ಬಂಗಲೆಗಳಲ್ಲಿ ಮಗಳ ಜೊತೆ ವಾಸ್ತವ್ಯ ಮಾಡಿದ ಜಯಲಲಿತಾ, ಅವಳನ್ನು ಪ್ರೀತಿಯಿಂದ ಕಂಡರೆ ಹೊರತು, ನೀನು ನನ್ನ ಮಗಳು ಎಂದು ಹೇಳಲಿಲ್ಲ.  ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪು ಜಯಲಲಿತಾ ಅವರ ಪರ ಬಂದಾಗ ಮುಖ್ಯಮಂತ್ರಿ ಜಯಲಲಿತಾ ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದರು. ಆಗ ರಾತ್ರಿ ಯಾರ ಗಮನಕ್ಕೂ ಬಾರದಂತೆ ಬೆಂಗಳೂರಿನ ಅಮೃತಾ ಮನೆಗೆ ಬಂದು ಮಗಳನ್ನು ನೋಡಿಕೊಂಡು, ಮಗಳ ಕೈಯಿಂದ ಒಂದು ಲೋಟ ಕುಡಿದು ಹೋಗಿದ್ದರಂತೆ. ಇದೂ ಕೂಡ ರಹಸ್ಯವಾಗಿಯೇ. ಆ ಸಂದರ್ಭದಲ್ಲೇ ನೀನು ನನ್ನ ಭೇಟಿ ಮಾಡಲು ಜನಜನಿತವಾಗಿ ಬರಬೇಡ, ಯಾವುದೇ ಕಾರಣಕ್ಕೂ ಶಶಿಕಲಾ ಸಹವಾಸಕ್ಕೆ ಹೋಗಬೇಡ, ರಾಜಕೀಯಕ್ಕಂತೂ ಬರಲೇಬೇಡ. ಎಲ್ಲಾದರೂ ಸುಖವಾಗಿರು ಎಂದು ಹೇಳಿದರಂತೆ.

ಹಠಮಾರಿ:

ಅಮೃತಾ ಅವರು ಕೂಡ ಜಯಲಲಿತಾರಂತೆಯೇ ಹಠಮಾರಿ. ಯಾರಿಂದಲೂ ಏನನ್ನೂ ತೆಗೆದುಕೊಳ್ಳುವವರಲ್ಲ ಸ್ವಾಭಿಮಾನಿ. ಈ ಮಧ್ಯೆ ಜಯಲಲಿತಾ ಸಾವಿಗೀಡಾದಾಗ ಇದೊಂದು ಕೊಲೆ ಎಂಬುದು ಅಮೃತಾಗೆ ಅರ್ಥವಾಗಿತ್ತು. ಹಾಗಾಗಿ ಅವರು ಪ್ರಧಾನಿ ಕಚೇರಿ ಮತ್ತು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಈ ಪ್ರಕರಣ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪತ್ರವನ್ನೂ ಬರೆದಿದ್ದಾರಂತೆ. ಈ ಎಲ್ಲಾ ಅಂಶಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿಗಳಿವೆ.

ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ರಿಜಿಸ್ಟರ್ ಆಗಿದೆಯಂತೆ. ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಿಬಿಐ ತನಿಖೆಯಾಗಬೇಕು. ಜಯಲಲಿತಾ ಅವರ ಪಾರ್ಥಿವ ಶರೀರದ ಮರುಪರೀಕ್ಷೆಯಾಗಬೇಕು. ಡಿಎನ್‍ಎ ಪರೀಕ್ಷೆಯಾಗಬೇಕು ಎಂಬುದು ಅಮೃತಾ ಅವರ ಒತ್ತಾಯವಾಗಿದೆ. ಏಕೆಂದರೆ ಯಾರು ಏನೇ ಹೇಳಿದರೂ ನಾನೇ ಅವರ ಔರಸ ಪುತ್ರಿ ಎನ್ನುತ್ತಾರೆ ಅಮೃತಾ. ಈ ಮಧ್ಯೆ ಜಯಲಲಿತಾ ಸಾವಿನ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ತಾವು ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.   ಒಂದು ಮೂಲದ ಪ್ರಕಾರ ಜಯಲಲಿತಾ ಅವರು ತಮ್ಮ ಮಗಳು ಅಮೃತಾ ಅವರ ಹೆಸರಿನಲ್ಲಿ ಖರೀದಿಸಿರುವ ಆಸ್ತಿ, ಒಡವೆಗಳ ಬಗ್ಗೆ ದಾಖಲೆಯೂ ಇವೆ ಎಂಬುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಮಂಜುಳಾ ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin