ಜಯಲಲಿತಾ ಬಳಿ ಕಾರು ಚಾಲಕನಾಗಿದ್ದ ಕನಕ ರಾಜ್ ನಿಗೂಢ ಸಾವು, ಕೊಲೆ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa-Driver

ಸೇಲಂ, ಏ.29– ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾರ ಮಾಜಿ ಕಾರು ಚಾಲಕ ಹಾಗೂ ನೀಲಗಿರಿ ಎಸ್ಟೇಟ್‍ನಲ್ಲಿರುವ ಜಯಾರ ಬಂಗಲೆಯ ಕಾವಲುಗಾರನ ಕೊಲೆ ಪ್ರಕರಣದ ಶಂಕಿತ ಆರೋಪಿ ಕನಕರಾಜ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಕುತೂಹಲ ಕೆರಳಿಸಿದ್ದು ತನಿಖೆ ತೀವ್ರಗೊಂಡಿದೆ.   ಸೇಲಂ ಜಿಲ್ಲೆಯ ಅಟ್ಟೂರು ಬಳಿ ಶುಕ್ರವಾರ ರಾತ್ರಿ ರಸ್ತೆಯಲ್ಲಿ ಕನಕರಾಜ್ ಶವ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದರೂ ಕೊಲೆ ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರವೇ ಇದು ದೃಢಪಡಲಿದೆ. ಜಯಾರಿಗೆ ಸೇರಿದ ಕೋಡನಾಡ್ ಎಸ್ಟೇಟ್ ಬಂಗಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ (ಕಾರು ಚಾಲಕನಾಗಿ) ಕನಕರಾಜ್ 2012ರಲ್ಲಿ ನೌಕರಿ ತ್ಯಜಿಸಿದ್ದ.


ಕಳೆದ ಐದು ದಿನಗಳ ಹಿಂದೆ ಬಂಗಲೆ ವಾಚ್‍ಮನ್ ಓಂ ಬಹದ್ದೂರ್ ಕೊಲೆ ಮತ್ತು ಕಳ್ಳತನ ಪ್ರಕರಣದಲ್ಲಿ ಈತ ಶಂಕಿತನೆಂದು ಪೊಲೀಸರು ಗುರುತಿಸಿದ್ದರು.  ಬೈಕ್‍ನಲ್ಲಿ ಹೋಗುತ್ತಿದ್ದ ಕನಕರಾಜ್‍ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಯಿತು.  ಇದು ಅಪಘಾತವೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರಿಗೆ ತಲೆನೋವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin