ಜಯಲಲಿತಾ ವಿರುದ್ದ ಸುಪ್ರೀಂನಲ್ಲಿ ಕರ್ನಾಟಕ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa-021

ಬೆಂಗಳೂರು, ಏ.5- ಅಕ್ರಮ ಆಸ್ತಿ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಹೆಸರನ್ನು ಕೈ ಬಿಟ್ಟಿದ್ದ ಸುಪ್ರೀಂಕೋರ್ಟ್ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಲಲಿತಾ ಅವರಿಗೆ 4ವರ್ಷ ಜೈಲು, 100 ಕೋಟಿ ರೂ. ದಂಡ ಹಾಗೂ ಇನ್ನಿತರೆ ಮೂವರಿಗೆ 10 ಕೋಟಿ ದಂಡ ಹಾಗೂ 4 ವರ್ಷ ಜೈಲು ಶಿಕ್ಷೆ ವಿಧಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್ ಜಯಲಲಿತಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಹೆಸರನ್ನು ತೀರ್ಪಿನಲ್ಲಿ ಕೈಬಿಟ್ಟಿತ್ತು.

ಹೆಸರು ಕೈ ಬಿಟ್ಟಿದ್ದ ಕ್ರಮ ಸರಿಯಲ್ಲ. ದಂಡ ಪಾವತಿಸುವಂತೆ ಆದೇಶಿಸಬೇಕೆಂದು ಸುಪ್ರೀಂಕೊರ್ಟ್‍ಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin