ಜಯಲಲಿತಾ ಶತ್ರು ಕರುಣಾನಿಧಿಯನ್ನು ಭೇಟಿ ಮಾಡಿದ ರಜನಿಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

Rajni

ಚೆನ್ನೈ. ಡಿ. 11 : ಇತ್ತೀಚಿಗೆ ನಿಧನರಾಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬದ್ಧ ಶತ್ರು ಕರುಣಾನಿಧಿಯವರನ್ನು ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ್ದಾತೆ. ಅನಾರೋಗ್ಯದಿಂದ ಬಳಲುತ್ತಿರುವ 93 ವರ್ಷದ ಕರುಣಾನಿಧಿ ಡಿಸೆಂಬರ್ 1 ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಡಿಸೆಂಬರ್ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರು ಗೋಪಾಲಪುರಂನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಸೂಪರ್ ಸ್ಟಾರ್ ರಜನಿಕಾಂತ್, ಡಿಎಂಕೆ ನಾಯಕ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಡಿಸೆಂಬರ್ 12 ರಂದು 66 ನೇ ವಸಂತಕ್ಕೆ ಕಾಲಿಡುತ್ತಿರುವ ರಜನಿಕಾಂತ್, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಸಾವಿನ ಹಿನ್ನಲೆಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ಈಗ ಶೋಕಾಚರಣೆ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹುಟ್ಟುಹಬ್ಬದ ಸಂಭ್ರಮ ಬೇಡವೆಂಬ ನಿರ್ಧಾರಕ್ಕೆ ರಜನಿಕಾಂತ್ ಬಂದಿದ್ದಾರೆನ್ನಲಾಗಿದೆ.  ಆದರೆ, ಈ ಭೇಟಿ ಅಮ್ಮನ ಅಭಿಮಾನಿಗಳಿಗೆ ಪ್ರಶ್ನೆಯಾಗಿದ್ದು ರಜನಿ ಕರುಣಾನಿಧಿಯವನ್ನು ಭೇಟಿ ಮಾಡಿದ ಅಸಲಿ ಕಾರಣವೇನು..? ಇದರಲ್ಲಿ ಏನಾದರೂ ಸ್ಟಾಲಿನ್ ರಾಜಕೀಯವಿದೆಯಾ ಎಂಬ ಕುತೂಹಲಗಳನ್ನು ಹುಟ್ಟುಹಾಕಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin