ಜಯಲಲಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಮಲಸೋದರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa

ಶ್ರೀರಂಗಪಟ್ಟಣ,ಡಿ.17-ಮುಖ್ಯಮಂತ್ರಿ ದಿ.ಜಯಲಲಿತ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಲಸೋದರ ವಾಸುದೇವನ್ ಹಾಗೂ ಸಹೋದರಿಯ ಪುತ್ರಿ ಒತ್ತಾಯಿಸಿದ್ದಾರೆ. ಪಟ್ಟಣದ ಯಜ್ಞವಲ್ಕ್ಯ ಮಂಟಪದಲ್ಲಿ ಜಯಲಲಿತ ಅವರ ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಜಯಲಲಿತ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿವೆ. ಈ ಗೊಂದಲ ಪರಿಹಾರಕ್ಕೆ ಪ್ರಕರಣದ ಸಿಬಿಐ ತನಿಖೆ ನಡೆಯಬೇಕು ಎಂದು ಹೇಳಿದರು.  ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ಮೋದಿಯವರಿಗೂ ಪತ್ರ ಬರೆಯಲಾಗಿದೆ. ಜಯಾ ಸಾವಿನಲ್ಲಿ ಅವರ ಗೆಳತಿ ಶಶಿಕಲಾ ಕೈವಾಡವಿದೆ ಎಂಬ ಅನುಮಾನ ದಟ್ಟವಾಗಿದೆ. ನನ್ನ ಸಹೋದರಿ ಬರೆದಿದ್ದಾರೆ ಎನ್ನಲಾದ ವಿಲ್ ಬಹಿರಂಗಪಡಿಸಬೇಕು, ಸಾವಿನ ಬಗ್ಗೆ ನಿಖರವಾದ ಕಾರಣ ತನಿಖೆಯಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ. ಇಂದು ಜಯಲಲಿತ ಅವರ ವೈಕುಂಠ ಸಮಾರಾಧನೆ ನಡೆಯಲಿದೆ. ಶ್ರೀ ವೈಷ್ಣವ ಪದ್ದತಿಯಂತೆ ಜಯಲಲಿತ ಅವರ ಮರು ಅಂತ್ಯಸಂಸ್ಕಾರ ನಡೆದಿದೆ ಎಂದು ವಾಸುದೇವನ್ ತಿಳಿಸಿದ್ದಾರೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin