ಜಯಾ ನಿವಾಸದ ಮುಂದೆ ಹೈಡ್ರಾಮಾ, ಪೋಯೆಸ್ ಗಾರ್ಡನ್ ಪ್ರವೇಶಿಸಲು ದೀಪಾಗೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Jayalalitha--01

ಚೆನ್ನೈ, ಜೂ.11-ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸ ಪೋಯೆಸ್ ಗಾರ್ಡನ್ ಇಂದು ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಜಯಾರಿಗೆ ಸೇರಿದ ಬಹುಕೋಟಿ ರೂ.ಗಳ ಆಸ್ತಿ-ಪಾಸ್ತಿ ಹಂಚಿಕೆಯು ದೊಡ್ಡ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಅವರ ಮನೆ ಮುಂದೆ ಅನಿರೀಕ್ಷಿತ ಘಟನೆಗಳು ನಡೆದವು.  ಜಯಲಲಿತಾರ ಸೋದರ ಸಂಬಂಧಿ ದೀಪಾ ಜಯಕುಮಾರ್ ಇಂದು ಪೊಯೇಸ್ ಗಾರ್ಡನ್‍ಗೆ ದಿಢೀರ್ ಭೇಟಿ ನೀಡಿದಾಗ ಅಲ್ಲಿದ್ದ ಎಐಎಡಿಎಂಕೆ ಅಮ್ಮ ಬಣ್ಣದವರು ಪ್ರತಿರೋಧ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನವಾಯಿತು. ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಘರ್ಷಣೆಯನ್ನು ತಪ್ಪಿಸಿದರು.

ಬಂಗಲೆಯ ಮುಂಭಾಗದಲ್ಲಿರುವ ತಮ್ಮ ಸೋದರತ್ತೆಯ ಭಾವಚಿತ್ರಕ್ಕೆ ಹಾರ ಹಾಕಲು ಅಲ್ಲಿಗೆ ದೀಪಾ ಹಠಾತ್ ಭೇಟಿ ನೀಡಿದ್ದೇ ಈ ಘಟನೆಗೆ ಕಾರಣವಾಯಿತು. ಹಾರ ಹಾಕಲು ದೀಪಾಗೆ ಇನ್ನೊಂದು ಬಣ ಅವಕಾಶ ನೀಡಿತು. ಆದರೆ ಮನೆಯೊಳಗೆ ಪ್ರವೇಶಿಸಲು ಅವರು ಯತ್ನಿಸಿದಾಗ ಅಮ್ಮ ಬಣದವರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ದೀಪಾರ ಸಹೋದರ ದೀಪಕ್ ಮನೆಯೊಳಗೆ ಇದ್ದರು.

ದೀಪಾಗೆ ಅಡ್ಡಿಪಡಿಸಿದ ಅಮ್ಮ ಬಣದ ಉಪ ಮಹಾ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಬೆಂಬಲಿಗರೊಂದಿಗೆ ಇನ್ನೊಂದು ಗುಂಪು ವಾಗ್ವಾದಕ್ಕೆ ಇಳಿದಾಗ ಅಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಂಗಲೆ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin