ಜರ್ಮನಿಯ ಈ ಸಲೂನ್ ನಲ್ಲಿ ಹೆಬ್ಬಾವಿನಿಂದ ಮಸಾಜ್ ಮಾಡ್ತಾರೆ..!

ಈ ಸುದ್ದಿಯನ್ನು ಶೇರ್ ಮಾಡಿ
 ಗ್ರಾಹಕರನ್ನು ಆಕರ್ಷಿಸಲು ಮಸಾಜ್ ಪಾರ್ಲರ್‍ಗಳು (ಅಂಗಮರ್ದನ ಕೇಂದ್ರಗಳು) ಮತ್ತು ಸಲೂನ್‍ಗಳು ನಾನಾ ತಂತ್ರಗಳನ್ನು ಅನುಸರಿಸುತ್ತವೆ. ಹೊಸ ಪರಿಕಲ್ಪನೆಗಳು ಮತ್ತು ನವೀನ ತಂತ್ರಜ್ಞಾನ ಗಳೊಂದಿಗೆ ಗಿರಾಕಿಗಳನ್ನು ಸೆಳೆಯುವುದು ಮಾಮೂಲಿನ ಸಂಗತಿ. ಆದರೆ ಜರ್ಮನಿಯ ಡ್ರೆಸ್ಡೆನ್ ನಗರದಲ್ಲೊಂದು ವಿಚಿತ್ರ ಸಲೂನ್ ಇದೆ. ಇದನ್ನು ವಿಲಕ್ಷಣ ಮಸಾಜ್ ಪಾರ್ಲರ್ ಎಂದೂ ಕರೆಯಬಹುದು. ಈ ಕೇಂದ್ರವು ಜನರನ್ನೂ ಬಹುವಾಗಿ ಆಕರ್ಷಿಸುತ್ತಿದೆ. ಇದಕ್ಕೆ ಕಾರಣವೂ ಅಷ್ಟೇ ವಿಚಿತ್ರ, ಆದರೂ ಸತ್ಯ. ಏಕೆ ಗೊತ್ತಾ? ಈ ಸಲೂನ್‍ನಲ್ಲಿ ಹೆಬ್ಬಾವಿನಿಂದ ಅಂಗಮರ್ದನ (ಪೈಥಾನ್ ಮಸಾಜ್) ಮಾಡಲಾಗುತ್ತದೆ.  ಈ ಮಸಾಜ್ ಪಾರ್ಲರ್‍ನಲ್ಲಿ ಮಾಂಟಿ ಎಂಬ ಹೆಬ್ಬಾವೊಂದನ್ನು ಸಾಕಿದ್ದಾರೆ. ಇದು ಗ್ರಾಹಕರಿಗೆ ಮಸಾಜ್ ಮಾಡುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಇದು ಗ್ರಾಹಕರ ಕುತ್ತಿಗೆಯನ್ನು ಸುತ್ತಿಕೊಳುತ್ತದೆ. ಆದರೆ ಕತ್ತು ಹಿಸುಕುವುದಿಲ್ಲ. ಬದಲಿಗೆ ಕುತ್ತಿಗೆಗೆ ಹಿತಾನುಭವ ನೀಡುತ್ತದೆ. ಈ ಸರ್ಪ ಸೇವೆ ಇಲ್ಲಿ ಕಳೆದ 13 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಇದರ ಮಾಲೀಕರು ಇದಕ್ಕಾಗಿ ಹಣ ಪಡೆಯುವುದಿಲ್ಲ. ಹೆಬ್ಬಾವಿನ ಮಸಾಜ್ ಉಚಿತ. ಈ ಸೇವೆಯಿಂದ ಸಂತುಷ್ಟರಾದವರು ಮಾಂಟಿ ಆಹಾರಕ್ಕಾಗಿ ಟಿಪ್ಸ್ ನೀಡಬಹುದು. ಸಾಮಾನ್ಯವಾಗಿ ಹೆಬ್ಬಾವು ಇತರ ಪ್ರಾಣಿಗಳ ಕೊರಳನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಕೊಂದು ನುಂಗುತ್ತವೆ. ಆದರೆ ಈ ಉರುಗ ಮನುಷ್ಯರ ಕುತ್ತಿಗೆಗೆ ಸುತ್ತಿ ಕೊಂಡರೆ ಹಿತಾನುಭದ ಜೊತೆಗೆ ಕತ್ತಿನ ನೋವು ಕಡಿಮೆಯಾಗುತ್ತದೆ. ಇದು ನಿಜಕ್ಕೂ ವಿಸ್ಮಯ ಅಲ್ಲವೇ..?

ಗ್ರಾಹಕರನ್ನು ಆಕರ್ಷಿಸಲು ಮಸಾಜ್ ಪಾರ್ಲರ್‍ಗಳು (ಅಂಗಮರ್ದನ ಕೇಂದ್ರಗಳು) ಮತ್ತು ಸಲೂನ್‍ಗಳು ನಾನಾ ತಂತ್ರಗಳನ್ನು ಅನುಸರಿಸುತ್ತವೆ. ಹೊಸ ಪರಿಕಲ್ಪನೆಗಳು ಮತ್ತು ನವೀನ ತಂತ್ರಜ್ಞಾನ ಗಳೊಂದಿಗೆ ಗಿರಾಕಿಗಳನ್ನು ಸೆಳೆಯುವುದು ಮಾಮೂಲಿನ ಸಂಗತಿ. ಆದರೆ ಜರ್ಮನಿಯ ಡ್ರೆಸ್ಡೆನ್ ನಗರದಲ್ಲೊಂದು ವಿಚಿತ್ರ ಸಲೂನ್ ಇದೆ. ಇದನ್ನು ವಿಲಕ್ಷಣ ಮಸಾಜ್ ಪಾರ್ಲರ್ ಎಂದೂ ಕರೆಯಬಹುದು. ಈ ಕೇಂದ್ರವು ಜನರನ್ನೂ ಬಹುವಾಗಿ ಆಕರ್ಷಿಸುತ್ತಿದೆ. ಇದಕ್ಕೆ ಕಾರಣವೂ ಅಷ್ಟೇ ವಿಚಿತ್ರ, ಆದರೂ ಸತ್ಯ. ಏಕೆ ಗೊತ್ತಾ? ಈ ಸಲೂನ್‍ನಲ್ಲಿ ಹೆಬ್ಬಾವಿನಿಂದ ಅಂಗಮರ್ದನ (ಪೈಥಾನ್ ಮಸಾಜ್) ಮಾಡಲಾಗುತ್ತದೆ.ಈ ಮಸಾಜ್ ಪಾರ್ಲರ್‍ನಲ್ಲಿ ಮಾಂಟಿ ಎಂಬ ಹೆಬ್ಬಾವೊಂದನ್ನು ಸಾಕಿದ್ದಾರೆ.

ಇದು ಗ್ರಾಹಕರಿಗೆ ಮಸಾಜ್ ಮಾಡುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಇದು ಗ್ರಾಹಕರ ಕುತ್ತಿಗೆಯನ್ನು ಸುತ್ತಿಕೊಳುತ್ತದೆ. ಆದರೆ ಕತ್ತು ಹಿಸುಕುವುದಿಲ್ಲ. ಬದಲಿಗೆ ಕುತ್ತಿಗೆಗೆ ಹಿತಾನುಭವ ನೀಡುತ್ತದೆ. ಈ ಸರ್ಪ ಸೇವೆ ಇಲ್ಲಿ ಕಳೆದ 13 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಇದರ ಮಾಲೀಕರು ಇದಕ್ಕಾಗಿ ಹಣ ಪಡೆಯುವುದಿಲ್ಲ. ಹೆಬ್ಬಾವಿನ ಮಸಾಜ್ ಉಚಿತ. ಈ ಸೇವೆಯಿಂದ ಸಂತುಷ್ಟರಾದವರು ಮಾಂಟಿ ಆಹಾರಕ್ಕಾಗಿ ಟಿಪ್ಸ್ ನೀಡಬಹುದು. ಸಾಮಾನ್ಯವಾಗಿ ಹೆಬ್ಬಾವು ಇತರ ಪ್ರಾಣಿಗಳ ಕೊರಳನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಕೊಂದು ನುಂಗುತ್ತವೆ. ಆದರೆ ಈ ಉರುಗ ಮನುಷ್ಯರ ಕುತ್ತಿಗೆಗೆ ಸುತ್ತಿ ಕೊಂಡರೆ ಹಿತಾನುಭದ ಜೊತೆಗೆ ಕತ್ತಿನ ನೋವು ಕಡಿಮೆಯಾಗುತ್ತದೆ. ಇದು ನಿಜಕ್ಕೂ ವಿಸ್ಮಯ ಅಲ್ಲವೇ..?

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin