ಜರ್ಮನಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್ ವಿರೋಧಿ ಸ್ಟೇನ್‍ಮಿಯರ್

ಈ ಸುದ್ದಿಯನ್ನು ಶೇರ್ ಮಾಡಿ

Frank-Walter-Steinmeier

ಬರ್ಲಿನ್, ಫೆ.13– ಅಮೆರಿಕದ ವಿವಾದಾತ್ಮಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿ ಎಂದೇ ಬಿಂಬಿಸಲ್ಪಟ್ಟಿರುವ ಜರ್ಮನಿಯ ಮಾಜಿ ವಿದೇಶಾಂಗ ಸಚಿವ ಫ್ರಾಂಕ್ ವಾಲ್ಟರ್ ಸ್ಟೇನ್‍ಮಿಯರ್ ದೇಶದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.   61 ವರ್ಷದ ಸ್ಟೇನ್‍ಮಿಯರ್ 1,239 ಮತಗಳಲ್ಲಿ 931 ಓಟ್‍ಗಳನ್ನು ಪಡೆದಿದ್ದಾರೆ. ಜರ್ಮಿನಿಯ ಚಾನ್ಸುಲರ್ ಆಂಜೆಲಾ ಮಾರ್ಕೆಲ್ ಅವರ ಕನ್ಸರ್‍ವೇಟಿವ್ ಪಕ್ಷವು ಪ್ರಬಲ ಅಭ್ಯರ್ಥಿಯ ಕೊರತೆ ಹಿನ್ನಲೆಯಲ್ಲಿ, ಅಧ್ಯಕ್ಷರಾಗಿದ್ದ ಜೋಕಿಂ ಗೌಕ್‍ರವರ ಸ್ಥಾನಕ್ಕೆ ಸ್ಟೇನ್‍ಮಿಯರ್ ಆಯ್ಕೆಗೆ ಸಮ್ಮತಿ ಸೂಚಿಸಿತು.   ಸಂಸದರು ಮತ್ತು 16 ರಾಜ್ಯಗಳ ಚುನಾಯಿತ ಪ್ರತಿನಿಧಿಗಳು (ಶಾಸಕರು) ವಿಶೇಷ ಫೆಡರಲ್ ಅಸೆಂಬ್ಲಿಯಲ್ಲಿ ಮತದಾನ ಮಾಡಿದರು.   ಆರಂಭದಿಂದಲೂ ಟ್ರಂಪ್ ವರ್ತನೆ ಬಗ್ಗೆ ಟೀಕಿಸುತ್ತಲೇ ಬಂದಿರುವ ನೂತನ ಅಧ್ಯಕ್ಷರು ಇತ್ತೀಚೆಗೆ ಟ್ರಂಪ್‍ರನ್ನು ದ್ವೇಷವನ್ನು ಬೋಧಿಸುವ ವಿಚಿತ್ರ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin