ಜಲಗಡಿಯಲ್ಲಿ ಮತ್ತೆ ಲಂಕಾ ನೌಕಾಪಡೆ ದೌರ್ಜನ್ಯ, ಬರಿಗೈಲಿ ವಾಪಸ್ಸಾದ ತಮಿಳುನಾಡು 2,000 ಬೆಸ್ತರು

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಜ.19-ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ಬೆಸ್ತರ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಕಚ್ಚತೀವು ಪ್ರದೇಶದಲ್ಲಿ 601 ಯಾಂತ್ರೀಕೃತ ದೋಣಿಗಳೊಂದಿಗೆ ಮೀನುಗಾರಿಕೆಯಲ್ಲಿ ತೊಡಗಿದ್ದ ಬೆಸ್ತರ ಬಲೆಗಳನ್ನು ಕತ್ತರಿಸಿದ ದ್ವೀಪರಾಷ್ಟ್ರದ ನೌಕಾಪಡೆ ಸಿಬ್ಬಂದಿ, ಸುಮಾರು 2,000 ಮೀನುಗಾರರನ್ನು ಹೆದರಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ರಾಮೇಶ್ವರ ಬೆಸ್ತರು ಕಚ್ಚತೀವು ಬಳಿ ನಿನ್ನೆ ಮೀನುಗಾರಿಕೆಯಲ್ಲಿ ತೊಡಗಿದ್ದರು. ಆಗ ಅಲ್ಲಿಗೆ ಬಂದ ಶ್ರೀಲಂಕಾ ನೌಕಾಪಡೆ ಯೋಧರು 10 ದೋಣಿಗಳನ್ನು ಸುತ್ತುವರೆದು ಬಲೆಗಳನ್ನು ಹರಿದು ಹಾಕಿದ್ದಾರೆ. ಅಲ್ಲದೇ ಬೆಸ್ತರಿಗೆ ಪ್ರಾಣಿ ಬೆದರಿಕೆವೊಡ್ಡಿದ ಪರಿಣಾಮ ಮೀನುಗಳನ್ನು ಹಿಡಿಯದೇ ಬರಿಗೈನಲ್ಲಿ ಹಿಂದಿರುಗಿದ್ದಾರೆ ಎಂದು ರಾಮೇಶ್ವರಂ ಫಿಶರ್‍ಮೆನ್ ಅಸೋಸಿಯೇಷನ್ ಅಧ್ಯಕ್ಷ ಪಿ ಸೆಸುರಾಜ್ ಆರೋಪಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಜಲಗಡಿ ಬಳಿ ಇತ್ತೀಚಿಗೆ ಬೆಸ್ತರು ಮತ್ತು ದ್ವೀಪರಾಷ್ಟ್ರದ ಕರಾವಳಿ ರಕ್ಷಣೆ ಪಡೆ ನಡುವೆ ಪದೇ ಪದೇ ಘರ್ಷಣೆ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin