ಜಲ ವಿವಾದಗಳ ನಿರ್ವಹಣೆಯ ಹೊರೆ ಸಚಿವ ಎಚ್.ಕೆ.ಪಾಟೀಲ್ ಹೆಗಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

HK-Paltil

ಬೆಂಗಳೂರು, ಸೆ.21– ಸತತವಾಗಿ ಅಂತಾರಾಜ್ಯ ಜಲ ವಿವಾದಗಳಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿರುವುದರಿಂದ ಇನ್ನು ಮುಂದೆ ಜಲ ವಿವಾದಗಳ ನಿರ್ವಹಣೆಯ ಹೊರೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಬದಲಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೆಗಲಿಗೆ ಹೊರಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.  ಮಹದಾಯಿ ವಿವಾದದಲ್ಲೂ ನ್ಯಾಯಾಂಗ ಹೋರಾಟದಲ್ಲಿ ರಾಜ್ಯಕ್ಕೆ ಜಯ ಸಿಕ್ಕಿಲ್ಲ. ಅತ್ಯಂತ ಗಂಭೀರ ಹಾಗೂ ಸೂಕ್ಷ್ಮ ವಿಷಯವಾಗಿರುವ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸತತ ನಾಲ್ಕು ಬಾರಿ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ನ್ಯಾಯಾಂಗ ಹೋರಾಟದಲ್ಲಿ ಸೋಲು ಕಂಡಿದೆ ಎಂದು ವಿರೋಧ ಪಕ್ಷಗಳು ಬಹಿರಂಗವಾಗಿ ಟೀಕಿಸುತ್ತಿವೆ. ಎಂ.ಬಿ.ಪಾಟೀಲ್ ಅವರ ವೈಫಲ್ಯ ಎದ್ದು ಕಾಣುತ್ತಿದೆ ಎಂಬ ಆರೋಪಗಳಿವೆ.

ಎಂ.ಬಿ.ಪಾಟೀಲ್ ಮುಂಜಾಗರೂಕತೆಯಾಗಿ ನ್ಯಾಯವಾದಿಗಳ ಜತೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ತಾಂತ್ರಿಕ ಮಾಹಿತಿಯನ್ನು ಕೋರ್ಟ್‍ಗೆ ಸರಿಯಾಗಿ ಒದಗಿಸುತ್ತಿಲ್ಲ ಎಂಬ ಆರೋಪಗಳಿವೆ. ಹಾಗಾಗಿ ಅಂತಾರಾಜ್ಯ ನದಿ ವಿವಾದಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಎಚ್.ಕೆ.ಪಾಟೀಲ್ ಹೆಗಲಿಗೆ ಹೊರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಎಚ್.ಕೆ.ಪಾಟೀಲ್ ಈ ಮೊದಲು ಜಲಸಂಪನ್ಮೂಲ ಸಚಿವರಾಗಿದ್ದು, ನೀರಾವರಿ ಇಲಾಖೆ ಹಾಗೂ ನದಿ ವಿವಾದಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಕೃಷ್ಣಾ, ಕಾವೇರಿ ನದಿ ವಿವಾದಗಳ ಬಗ್ಗೆ ಹೆಚ್ಚು ಮಾಹಿತಿ ಇದ್ದು, ಅವರಿಗೆ ಜವಾಬ್ದಾರಿ ವಹಿಸುವುದರಿಂದ ಮುಂದಿನ ಕಾನೂನು ಹೋರಾಟದಲ್ಲಿ ಯಶಸ್ಸು ಸಾಧಿಸಬಹುದು ಎಂಬ ನಂಬಿಕೆಯನ್ನು ಸರ್ಕಾರ ಹೊಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin