ಜಾಕಿಚಾನ್‍ಗೆ ಹಿಂದಿ ಹೇಳಿಕೊಟ್ಟಳಂತೆ ದಿಶಾ..!

ಈ ಸುದ್ದಿಯನ್ನು ಶೇರ್ ಮಾಡಿ

Disha

ಕುಂಗ್‍ಫು ಲೋಕದ ದಂತಕಥೆ ಜಾಕಿ ಜಾನ್ ಜೊತೆ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ಇದರಿಂದ ಇಂಡೋ-ಚೀನಾ ನಡುವೆ ಸಾಂಸ್ಕೃತಿ ಕ ವಿನಿಮಯವಾಯಿತು. ಅಲ್ಲದೇ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಜಾಕಿಗೇ ಸ್ಟೆಪ್ಸ್‍ಗಳನ್ನು ನಾನು ಹೇಳಿಕೊಟ್ಟಿದ್ದು, ಖುಷಿಯ ವಿಷಯವಲ್ಲದೇ ಮತ್ತೇನು? ಎಂದು ಬಾಲಿವುಡ್ ನವತಾರೆ ದಿಶಾ ಪಟಾನಿ ಹೇಳಿದ್ದಾಳೆ. ಇಂಡೋ-ಚೀನಾ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಕುಂಗ್ ಫು ಯೋಗ ಈ ಎರಡು ದೇಶಗಳ ಅತ್ಯಂತ ಪ್ರಾಚೀನ ಕಲೆಗಳನ್ನು ಪ್ರತಿನಿಧಿಸುವ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿನ ಬ್ಯಾಂಗ್ ಬ್ಯಾಂಗ್ ಹಾಡಿನಲ್ಲಿ ಜಾಕಿ ಚಾನ್ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಡ್ಯಾನ್ಸ್ ಇಷ್ಟ.

ನಾನು ಕೆಲವು ಸ್ಟೆಪ್ಸ್‍ಗಳನ್ನು ಅವರಿಗೆ ಹೇಳಿಕೊಟ್ಟೆ ಎಂದು ದಿಶಾ ತಿಳಿಸಿದ್ದಾರೆ. ಚಾನ್ ಜೊತೆ ಕೆಲಸ ಮಾಡಿದ್ದು ಸಾಂಸ್ಕೃತಿ ಯ ವಿನಿಮಯದ ಅನುಭವ ನೀಡಿತು. ಅವರು ನನಗೆ ಚೀನಿ ಪದಗಳನ್ನು ಹೇಳಿಕೊಟ್ಟರು. ನಾನು ಹಿಂದಿಯ ಕೆಲವು ಪದಗಳನ್ನು ಅವರಿಗೆ ಕಲಿಸಿದೆ. ಅವರು ಒಂದು ಚೀನಿ ಹಾಡನ್ನೂ ಹಾಡಿದರು. ಅವರಲ್ಲಿ ಒಬ್ಬ ಉತ್ತಮ ಗಾಯಕನಿದ್ದಾನೆ ಎಂದು ದಿಶಾ ಜಾಕಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಳು.

 

► Follow us on –  Facebook / Twitter  / Google+

Facebook Comments

Sri Raghav

Admin