ಜಾಗತಿಕ ಸಮಸ್ಯೆಗಳ ನಿವಾರಣೆಗೆ ಕ್ಸಿ ಬೆಂಬಲ ಕೋರಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump--02

ಬೀಜಿಂಗ್, ನ.9-ಚೀನಾ ಸಹಕಾರ ನೀಡಿದರೆ ಉತ್ತರ ಕೊರಿಯಾದ ಅಣ್ವಸ್ತ್ರ ಬಿಕ್ಕಟ್ಟು ಮತ್ತು ದೊಡ್ಡ ಅಪಾಯ ತಂದೊಡ್ಡಿರುವ ಜಗತ್ತಿನ ಇತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದಕ್ಕಾಗಿ ಬೀಜಿಂಗ್ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.
ಏಷ್ಯಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಚೀನಾದ ತಮ್ಮ ಸಹವರ್ತಿ ಕ್ಸಿ ಜಿನ್‍ಪಿಂಗ್ ಅವರೊಂದಿಗೆ ವ್ಯಾಪಕ ಶ್ರೇಣಿಯ ಮಹತ್ವದ ಮಾತುಕತೆ ನಡೆಸಿದರು.

ಏಷ್ಯಾ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳಿಗೆ ಆತಂಕ ತಂದೊಡ್ಡಿರುವ ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮಗಳು ಹಾಗೂ ವ್ಯಾಪಾರ ಸಂಬಂಧ ವೃದ್ಧಿ ಕುರಿತ ವಿಷಯಗಳು ಈ ನಾಯಕರ ಭೇಟಿ ವೇಳೆ ಪ್ರಮುಖವಾಗಿ ಚರ್ಚೆಯಾದವು. ಬೀಜಿಂಗ್‍ನ ಗ್ರೇಟ್ ಹಾಲ್ ಆಫ್ ಪೀಪಲ್‍ನಲ್ಲಿ ಟ್ರಂಪ್ ಮತ್ತು ಕ್ಸಿ ನಡುವೆ ನಡೆದ ಮಾತುಕತೆ ಏಷ್ಯಾ ದೇಶಗಳಲ್ಲಿ ಕುತೂಹಲ ಕೆರಳಿಸಿದೆ. ಅಮೆರಿಕ ಮತ್ತು ಚೀನಾ ಜೊತೆಯಾದರೆ ಜಗತ್ತಿನಲ್ಲಿರುವ ಎಲ್ಲ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ನಾನು ಕ್ಸಿ ಜಿನ್‍ಪಿಂಗ್ ಅವರಿಗೆ ತಿಳಿಸಿದ್ದೇನೆ ಎಂದು ಟ್ರಂಪ್ ಹೇಳಿದರು.

ಇಂದು ಬೆಳಗ್ಗೆ ನಾನು ಮತ್ತು ಚೀನಾ ಅಧ್ಯಕ್ಷರು ಕೆಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದೆವು. ವಿಶೇಷವಾಗಿ ಉತ್ತರ ಕೊರಿಯಾ ಬಗ್ಗೆ ಚರ್ಚೆಯಾಯಿತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಮಾತನಾಡಿದೆವು ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಮೂರು ದಿನಗಳ ಭೇಟಿಗಾಗಿ ಚೀನಾಗೆ ಆಗಮಿಸಿದ ಟ್ರಂಪ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷರಿಗೆ ಚೀನಾ ಭೇಟಿ ಮಹತ್ವದ್ದಾಗಿದೆ.

Facebook Comments

Sri Raghav

Admin