‘ಜಾಗ್ವಾರ್’ ಘರ್ಜನೆ ಶುರು, ಹೊಸ ಪ್ರಯತ್ನಕ್ಕೆ ಎಲ್ಲೆಲ್ಲೂ ಉತ್ತಮ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Jaguar-n

ಬೆಂಗಳೂರು, ಅ.6– ಬಹೃತ್ ನಿರೀಕ್ಷೆಯ ಅದ್ಧೂರಿ ಚಿತ್ರವೆಂದೇ ಪರಿಗಣಿಸಲಾಗಿರುವ ಜಾಗ್ವಾರ್ ಚಿತ್ರ ಇಂದು ಕರ್ನಾಟಕ ಮತ್ತು ಆಂಧ್ರದಲ್ಲಿ ಏಕಕಾಲದಲ್ಲಿ ಪ್ರದರ್ಶನ ಆರಂಭಿಸಿದೆ.
ಕ್ಲಾಸ್ ಮತ್ತು ಮಾಸ್ ಚಿತ್ರವೆಂದೇ ಹೇಳಲಾಗುತ್ತಿರುವ ಜಾಗ್ವಾರ್ ಚಿತ್ರ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಅದರಲ್ಲೂ ಬೆಳ್ಳಿತೆರೆಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿ ಅದ್ಧೂರಿ ತಾರಾಗಣದೊಂದಿಗೆ ತಂತ್ರಜ್ಞಾನ , ಆಡಿಯೋ ಬಿಡುಗಡೆ, ಚಿತ್ರೀಕರಣ ಎಲ್ಲದರಲ್ಲೂ ಹೊಸತನದೊಂದಿಗೆ ಆಧುನಿಕ ಟಚ್ ನೀಡಿ ಸುದ್ದಿ ಮಾಡಿದ್ದ ಜಾಗ್ವಾರ್ ಇಂದು ಮನ ತಣಿಸಲು ಪ್ರದರ್ಶನ ಕಾಣುತ್ತಿದೆ.

Devegouda
ಜನರ ಮಧ್ಯೆ ಕುಳಿತು ಮೊಮ್ಮಗನ ಸಿನಿಮಾ ನೋಡಿದ ಮಾಜಿ ಪ್ರಧಾನಿ ದೇವೇಗೌಡರು

ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬೆಳಗ್ಗೆ 7ರಿಂದಲೇ ಚಿತ್ರಪ್ರದರ್ಶನ ಆರಂಭಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ ದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಚಿತ್ರ ನಟ ನಿಖಿಲ್‍ಕುಮಾರಸ್ವಾಮಿ ನಗರದ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದೆನಿಸಿದ ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದರು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್‍ಗೆ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿ ಜನರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್‍ಗೆ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿ ಜನರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು

ಪ್ರೇಕ್ಷಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ನಿಖಿಲ್‍ನನ್ನು ನಾಯಕ ನಟನಾಗಿ ಸ್ವೀಕರಿಸಿ ಆತನ ಅಭಿನಯ ಹಾಗೂ ಚಿತ್ರಕ್ಕೆ ಮಾರುಹೋಗಿದ್ದಾರೆ. ಬೆಳಗ್ಗಿನಿಂದಲೇ ಜಾಗ್ವಾರ್ ಚಿತ್ರ ಪ್ರದರ್ಶನ ಕಂಡ ಚಿತ್ರ ಮಂದಿರಗಳ ಬಳಿ ಕಿಕ್ಕಿರಿದು ನಿಂತು ಜನ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದರು. ನಿರೀಕ್ಷೆಯಂತೆ ಚಿತ್ರ ಮೂಡಿಬಂದಿದ್ದು, ಅಂದುಕೊಂಡಂತೆ ಇದೇ ಚಿತ್ರ ಬಿಡುಗಡೆಗೊಳಿಸಿದ್ದು, ಕನ್ನಡ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

Jagwar 2

 

Jguar

 

ಮೈಸೂರು ವರದಿ:

ಜಾಗ್ವಾರ್ ಚಿತ್ರದ ಯಶಸ್ಸು ಕೋರಿ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಇಂದು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  ನಂತರ ಭಕ್ತರಿಗೆ ಲಾಡು ವಿತರಿಸಿ ಸಂಭ್ರಮಾಚರಿಸಲಾಯಿತು. ಈ ವೇಳೆ ಮೇಯರ್ ಬೈರಪ್ಪ, ಜೆಡಿಎಸ್‍ನ ನಗರಪಾಲಿಕೆ ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ನಿಖಿಲ್ ಅಭಿನಯದ ಚೊಚ್ಚಲ ಚಿತ್ರ ಜಾಗ್ವಾರ್ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಶತದಿನ ಪೂರೈಸಲಿ ಎಂದು ಹಾರೈಸಿದರು.

ಮಂಡ್ಯ ವರದಿ:

ಅದ್ಧೂರಿ ಮೇಕಿಂಗ್‍ನ ಭಾರೀ ನಿರೀಕ್ಷೆ ಹುಟ್ಟಿಸಿದ ಜಾಗ್ವಾರ್ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನಗೊಳ್ಳಲಿ ಎಂದು ಜೆಡಿಎಸ್ ನಾಯಕರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ 7.30ರಿಂದ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ವಿದ್ಯಾನಗರದಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ ಜೆಡಿಎಸ್ ನಾಯಕರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ಮೊದಲ ಪ್ರದರ್ಶನಗೊಂಡ ನಂತರ ಚಿತ್ರ ವೀಕ್ಷಣೆಗೆ ಬಂದವರಿಗೆ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಪಟ್ಟರು.

ಪಾಂಡವಪುರ ವರದಿ:

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಅಭಿನಯದ ಚೊಚ್ಚಲ ಚಲನಚಿತ್ರ ಜಾಗ್ವಾರ್ ಯಶಸ್ವಿಯಾಗಲೆಂದು ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿ.ಎಸ್.ಪುಟ್ಟರಾಜು ಅಭಿಮಾನಿ ಬಳಗದವತಿಯಿಂದ ಇಂದು ಪಟ್ಟಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ತ್ಯಾಗರಾಜ ಕಾಲೂನಿಯಲ್ಲಿರುವ ವರಸಿದ್ದಿ ವಿನಾಯಕ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಸಿ.ಎಸ್.ಪುಟ್ಟರಾಜು ಅವರ ನೂರಾರು ಅಭಿಮಾನಿಗಳು ಪಾಲ್ಗೊಂಡು ಚಿತ್ರ ಯಶಸ್ಸಿಗೆ ಪ್ರಾರ್ಥಿಸಿದರು.

ಚಿನಕುರಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಅಶೋಕ್ ಮಾತನಾಡಿ, ಜಾಗ್ವಾರ್ ಚಲನಚಿತ್ರದ ಬಗ್ಗೆ ಈಗಾಗಲೇ ರಾಜ್ಯದಾದ್ಯಂತ ಅಲೆ ಎದ್ದಿದೆ. ಟ್ರೇಲರ್ ನೋಡಿಯೇ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಇಂತಹ ಅದ್ಧೂರಿ ಚಿತ್ರ ಶತದಿನ ಆಚರಿಸುವುದರ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ನಿಖಿಲ್ ಉಜ್ವಲ ನಟನಾಗಿ ಬೆಳಗಲಿ ಎಂದು ಹಾರೈಸಿದರು.

ಕೋಲಾರ ವರದಿ:

ನಾರಾಯಣ ಚಿತ್ರಮಂದಿರದಲ್ಲಿ ಬೆಳಗ್ಗೆ ನಾಯಕ ನಟ ನಿಖಿಲ್ ಕುಮಾರ್ ಅವರ ಆಳೆತ್ತರದ ಕಟೌಂಟ್‍ಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸಿದರು. ಕುಮಾರಸ್ವಾಮಿ ಅಭಿಮಾನಿ ಬಳಗದ ಕಾರ್ತಿಕ್‍ರೆಡ್ಡಿ, ಮಂಜುನಾಥ್ ಅವರ ನೇತೃತ್ವದಲ್ಲಿ ಚಿತ್ರಮಂದಿರದ ಎದುರು ಎರಡು ಕುರಿಗಳನ್ನು ಹೊಡೆದು ಚಿತ್ರ ವೀಕ್ಷಿಸಲು ಬಂದ ಅಭಿಮಾನಿಗಳಿಗೆ ಬಿರಿಯಾನಿ ನೀಡಿ ಸಂತಸ ವ್ಯಕ್ತಪಡಿಸಿದರು ಹಾಗೂ 501 ತೆಂಗಿನ ಕಾಯಿ ಹೊಡೆದು ಶತದಿನ ಪೂರೈಸಲು ಶುಭಹಾರೈಸಿದರು.

ತುಮಕೂರು ವರದಿ:

ಜಾಗ್ವಾರ್ ಚಿತ್ರ ನೋಡಲು ಇಲ್ಲಿನ ಗಾಯಿತ್ರಿ ಟಾಕೀಸ್‍ನಲ್ಲಿ ನೂಕು ನುಗ್ಗಲು ಉಂಟಾಯಿತು.

Facebook Comments

Sri Raghav

Admin