ಜಾಡಮಾಲಿಗಳ ಜಗತ್ತು ಕೃತಿ ಕುರಿತು ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

hasana-5

ಹಾಸನ, ಆ.9- ಜಾಡಮಾಲಿಗಳ ಜಗತ್ತು ತಳಸಮುದಾಯದ ತಲ್ಲಣಗಳ, ಬದುಕಿನ ಬವಣೆ, ಜಿಲ್ಲೆಯ ವಿವಿಧ ತಾಲ್ಲೂಕುವಾರು ಹಲವಾರು ಶೋಷಣೆಗಳ ಕರಾಳ ಮುಖಗಳನ್ನು ಹೆತ್ತೂರು ನಾಗರಾಜ್ ತಮ್ಮ ಬರವಣಿಗೆಯಲ್ಲಿ ನಿರ್ಭಿಡತೆಯಿಂದ ತೆರೆದಿಟ್ಟಾದ್ದಾರೆ ಎಂದು ರಂಗಭೂಮಿ ಕಲಾವಿದ ಜಯಶಂಕರ್ ಬೆಳಗುಂಬ ಅಭಿಪ್ರಾಯಪಟ್ಟರು.
ಆರ್.ಸಿ.ರಸ್ತೆಯಲ್ಲಿರುವ ಹಾಡ್ಲಹಳ್ಳಿ ಪ್ರಕಾಶನದ ಆವರಣದಲ್ಲಿ ಸುಜಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜುಲ್ಫಿಕರ್ ಅಹಮದ್ ಅವರ ಪ್ರಾಯೋಜಕತ್ವದಲ್ಲಿ ನಡೆದ 233 ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಅಂಬೇಡ್ಕರ್ ಯುವಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಹೆತ್ತೂರು ನಾಗರಾಜುರವರ ಜಾಡಮಾಲಿಗಳ ಜಗತ್ತು ಕೃತಿಕುರಿತು ಮಾತನಾಡಿದರು.
ದಲಿತರನ್ನು ದೇವಾಲಯಕ್ಕೆ ನಿರ್ಬಂಧ ಹೇರಿದಾಗ ಒತ್ತಾಯವಾಗಿ ಅದರೊಳಗೆ ಪ್ರವೇಶ ಬಯಸುವ ಬದಲು ಆ ದೇವರನ್ನೇ, ದೇವಸ್ಥಾನವನ್ನೇ ನಾವೇ ದಿಕ್ಕರಿಸಬೇಕಿದೆ ಎಂಬ ಸಂದೇಶವನ್ನು ಈ ಕೃತಿಯಲ್ಲಿ ಹೆತ್ತೂರರು ನೀಡಿದ್ದಾರೆ ಎಂದರು.ಸಂವಾದ-ಚರ್ಚೆ- ನಂತರ ಉಪನ್ಯಾಸದ ಮೇಲೆ ನಡೆದ ಸಂವಾದದಲ್ಲಿ ಚಂದ್ರಕಾಂತ ಪಡೆಸೂರ, ನಾಗರಾಜ್ ಹೆತ್ತೂರ್, ಜಯದೇವಪ್ಪ, ಡಾ.ಗುಪ್ತ, ಚಲಂ ಹಾಡ್ಲಹಳ್ಳಿ, ನಾಗರಾಜ್ ಹೆತ್ತೂರ್, ಕೊಟ್ರೇಶ್ ಎಸ್.ಉಪ್ಪಾರ್ ಪಾಲ್ಗೊಂಡಿದ್ದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಡಾ.ಸ.ನಂ.ಬಸವೇಗೌಡ, ಸಮುದ್ರವಳ್ಳಿ ವಾಸು, ಡಾ.ಎ.ಚಂದ್ರಶೇಖರ್, ಕೆ.ಸಿ.ಗೀತ, ಸಿ.ಎನ್.ತಿಮ್ಮೇಗೌಡ, ಎಂ.ಆರ್.ಕುಮುದ, ಶ್ರೀವಿಜಯ ಹಾಸನ, ಚೂಡಾಮಣಿ ಹೆಚ್.ಬಿ, ಗ್ಯಾರಂಟಿ ರಾಮಣ್ಣ, ಪ್ರಮೋದ್ ಬೆಳಗೋಡು, ವೆಂಕಟೇಶ್ ಆರ್, ದಿವಾಕರ್ ಆಜಾದ್, ಕಲಾವತಿ ಮಧುಸೂದನ್, ಚಿನ್ನೇನಹಳ್ಳಿ ಸ್ವಾಮಿ, ಶಾಂತಅತ್ನಿ, ಬಿ.ವೇದಾವತಿ, ಚಂದ್ರಕಾಂತ ಪಡೆಸೂರ, ಜಯಶಂಕರ್ ಬೆಳಗುಂಬ, ಚಲಂ ಹಾಡ್ಲಹಳ್ಳಿ, ಕೊಟ್ರೇಶ್ ಎಸ್.ಉಪ್ಪಾರ್, ಡಾ.ಕೆ.ಕೆ.ಜಯಚಂದ್ರಗುಪ್ತ ಮುಂತಾದವರು ಕಾವ್ಯ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷರಾದ ಪ್ರಕಾಶ್, ಜಯದೇವಪ್ಪ. ಹೆಚ್.ಎಸ್.ದೇವಿರಮ್ಮ ಮುಂತಾದವರು ಪಾಲ್ಗೊಂಡಿದ್ದರು.

Facebook Comments

Sri Raghav

Admin