ಜಾತಿ-ದಬ್ಬಾಳಿಕೆ ದೂರವಾಗಿಲ್ಲ : ನಂಜುಂಡಯ್ಯ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

dabaspete

ದಾಬಸ್‍ಪೆಟೆ,ಆ.19- ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಜಾತಿ ಪದ್ಧತಿ ದೂರವಾಗಿಲ್ಲ. ಪರಿಶಿಷ್ಟ ಜಾತಿ, ವರ್ಗದ ಸಮುದಾಯ ಸಾಕಷ್ಟು ದಬ್ಬಾಳಿಕೆ ದೌರ್ಜನ್ಯ ಅನುಭವಿಸುವಂತಾಗಿದೆ ಜಿಲ್ಲಾ ಪಂಚಾಯ್ತಿ ಸದಸ್ಯ ನಂಜುಂಡಯ್ಯ ಅಭಿಪ್ರಾಯಪಟ್ಟರು.
ದಾಬಸಪೇಟೆ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಲಿತ ಕೇರಿಗಳಲ್ಲಿ ಮೂಲಭೂತ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ, ರಸ್ತೆ, ಕುಡಿಯುವ ನೀರು ಬೆಳಕು ಸೇರಿದಂತೆ ಅವಶ್ಯಕವಾದ ಸೌಲಭ್ಯಗಳಿಂದಲೂ ವಂಚಿತವಾಗುತ್ತಿವೆ ಎಂದರು.

ಸಭೆಯಲ್ಲಿ ಸೋಂಪುರ ಹೋಬಳಿಯ ದಲಿತ ಕಾಲೋನಿಗಳಲ್ಲಿನ ಸಮಸ್ಯೆಗಳು ಮತ್ತು ಅವಶ್ಯಕತೆಯುಳ್ಳ ಸೌಲಭ್ಯಗಳ ಬಗ್ಗೆ ದಲಿತ ಮುಖಂಡರು ಮಾಹಿತಿ ನೀಡಿದರು. ಸ್ಮಶಾನ, ಅಂಗನವಾಡಿ ಕೇಂದ್ರಗಳು, ಶಾಲೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಚರಂಡಿ ಅವ್ಯವಸ್ಥೆ ಬಗ್ಗೆ ಹಾಗೂ ಮೂಲಭೂತ ಸಮಸ್ಯೆಗಳ ಬಗ್ಗೆ ಗ್ರಾಮದ ಮುಖಂಡರು ಗಮನಸೆಳೆದರು. ವೃತ್ತ ನಿರೀಕ್ಷಕ ನಾಗರಾಜು, ಸಬ್‍ಇನ್ಸ್ ಪೆಕ್ಟರ್ ನವೀನ್‍ಕುಮಾರ್, ಮರಳಕಂಟೆ ಗ್ರಾಪಂ ಅಧ್ಯಕ್ಷ ಅಶ್ವಥ ನಾರಾಯಣ ಮತ್ತು ಹೋಬಳಿಯ ವಿವಿಧ ದಲಿತ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 

► Follow us on –  Facebook / Twitter  / Google+

Facebook Comments

Sri Raghav

Admin