ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmappa----01

ಬೆಳಗಾವಿ (ಸುವರ್ಣಸೌಧ), ನ.15-ಸಕಾಲ ಯೋಜನೆಯಡಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗೆ ನೀಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಪರಿಷತ್‍ನಲ್ಲಿಂದು ಎಚ್ಚರಿಸಿದರು.  ಸಕಾಲ ಯೋಜನೆಯಲ್ಲಿ ಜಾತಿ ಪ್ರಮಾಣ ಪತ್ರವು ಸೇರ್ಪಡೆಯಾಗಿದೆ. ಇದರ ಪ್ರಕಾರ 21 ದಿನದೊಳಗೆ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳಿದರು.

ಬಿಜೆಪಿಯ ರಘುನಾಥ್ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಬ್ಬಿಣ ಕಾದಾಗಲೇ ಬಿಸಿ ಮುಟ್ಟಿಸಬೇಕು. ಆಡಳಿತದಲ್ಲಿ ವಿಳಂಬ ಎನ್ನುವುದು ನಮ್ಮ ಸಂಸ್ಕøತಿಯ ಭಾಗವಾಗಿದೆ. ಮುಂದೆ ಇಂತಹ ಪ್ರಮಾದಗಳು ನಡೆಯದಂತೆ ವಹಿಸುವುದಾಗಿ ತಿಳಿಸಿದರು. 2015ರಲ್ಲಿ ಬೀದರ್ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆಯಲು 40, 892ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 18,667 ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. 20,840 ಅರ್ಜಿಗಳು ತಿರಸ್ಕøತಗೊಂಡಿದ್ದರೆ, 1,375 ಅರ್ಜಿಗಳು ಬಾಕಿ ಉಳಿದಿವೆ.

2016-17ರಲ್ಲಿ 41,117 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 20,961 ಅರ್ಜಿಗಳನ್ನು ವಿತರಣೆ ಮಾಡಿದ್ದರೆ, 18,707 ಅರ್ಜಿಗಳು ತಿರಸ್ಕøತವಾಗಿವೆ. 1,449 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿಳಂಬ ಮಾಡದೆ ಶೀಘ್ರ ವಿತರಿಸಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಈ ಭಾಗದಲ್ಲಿ ವಿಳಂಬವಾಗಿದ್ದರೆ ಖುದ್ದು ನಾನೇ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸುತ್ತೇನೆ ಎಂದು ಸದನಕ್ಕೆ ಆಶ್ವಾಸನೆ ನೀಡಿದರು.

Facebook Comments

Sri Raghav

Admin