ಜಾತಿ, ವರ್ಗ ರಹಿತ ಸಮಾಜ : ನಾರಾಯಣ ಗುರುಗಳ ಕನಸಾಗಿತ್ತು

ಈ ಸುದ್ದಿಯನ್ನು ಶೇರ್ ಮಾಡಿ

4
ಗದಗ,ಅ.5- ವರ್ಣಾಶ್ರಮಗಳ ಪದ್ಧತಿಯಲ್ಲಿ ಅನೇಕ ಅನಿಷ್ಟ ಆಚರಣೆಗಳ ಮೂಲಕ ಕೆಳವರ್ಗದವರ ಬದುಕು ಸ್ವಾತಂತ್ರ್ಯಪೂರ್ವಕಾಲದಲ್ಲಿ ಅಸಹನೀಯ ವಾಗಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಆಧ್ಯಾತ್ಮಿಕವಾಗಿಯೂ ಅಸಮಾನತೆಗಳು ಸಮಾಜದಲ್ಲಿತ್ತು. ಕೆಳವರ್ಗದ ಈಡಿಗ ಸಮಾಜದಲ್ಲಿ ಜನಿಸಿದ ನಾರಾಯಣಗುರುಗಳು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಮಾಡಿದ ಕಾರ್ಯಗಳು ಅಮೋಘವಾದುದು ಎಂದು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.ಅವರು ತೋಂಟದಾರ್ಯವಠದಲ್ಲಿ ಜರುಗಿದ 2296ನೇ ಶಿವಾನುಭವ ದಲ್ಲಿ ನಡೆದ ನಾರಾಯಣಗುರು ಸ್ಮರಣೆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಪುರೋಹಿಶಾಹಿಗಳು ನಿಮ್ನ ವರ್ಗದವರಿಗೆ ಹಾಗೂ ಮಹಿಳೆಯರಿಗೆ ದೇವಾಲಯದಲ್ಲಿ ನಿಷೇಧಿಸಿದ ಕಾಲದಲ್ಲಿ ಮುಕ್ತ ಪ್ರವೇಶಕ್ಕಾಗಿ ಚಳುವಳಿಯನ್ನು ನಡೆಸುವಲ್ಲಿ ನಾರಾಯಣಗುರುಗಳು ಯಶಸ್ವಿಯಾದರು. ಟ್ಯಾಗೋರ, ಗಾಂಧೀಯಂಥಹವರ ಮೇಲೆ ಅಗಾಧವಾದ ಪ್ರಭಾವವನ್ನು ಕೂಡ ಬೀರಿದ್ದ ರೆಂದು ತಿಳಿಸಿದರು. ಬೆಟಗೇರಿಯ ಹಿರಿಯ ಆಶುಕವಿ ರಾಮಣ್ಣ ಬ್ಯಾಟಿ ಅವರು ರಚಿಸಿದ ಬ್ರಹ್ಮರ್ಷಿ ನಾರಾಯಣಗುರು ಪುರಾಣ ಕುರಿತು ಸಿದ್ಧಲಿಂಗೇಶ ಸಜ್ಜನಶೆಟ್ಟರ ಮಾತನಾಡಿ, ನಾರಾಯಣಗುರುಗಳು ಕೇರಳದಲ್ಲಿ ಜನಿಸಿದರೂ ತಮ್ಮ ವಿಚಾರ ಮತ್ತು ಆಚರಣೆಗಳ ಮೂಲಕ ದೇಶದ ಗಮನವನ್ನು ಸೆಳೆದರು. ಸಮಾಜ ದಲ್ಲಿರುವ ಎಲ್ಲ ವರ್ಗದ ಜನರು ಸಹೋದರತ್ವದ ಆಧಾರದ ಮೇಲೆ ಬದುಕನ್ನು ಬದುಕುವ ದಿಸೆಯಲ್ಲಿ ಅನೇಕ ಚಿಂತನೆಗಳನ್ನು ಹರಡಿದರು. ಶೋಷಿತವರ್ಗದವರ ಧ್ವನಿಯಾಗಿ, ಮಹಿಳಾ ಸಮಾನತೆಯ ಹರಿಕಾರರಾಗಿ ತಮ್ಮ ಬದುಕಿನುದ್ದಕ್ಕೂ ಕಾರ್ಯ ಮಾಡಿದರು. ಎಲ್ಲ ಜನರಿಗೂ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ ದೇಶದ ಮಹಾನ್ ಸಂತ ಎಂದು ಬಣ್ಣಸಿದರು.
ಬ್ರಹ್ಮರ್ಷಿ ನಾರಾಯಣಗುರುಗಳ ಜೀವನ ಸಾಧನೆ ಕುರಿತು ಮುಳಗುಂದದ ಸರಕಾರಿ ಪಪೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿದ್ದಲಿಂಗೇಶ ಯು.ಸಜ್ಜನಶೆಟ್ಟರ್ ಉಪನ್ಯಾಸ ನೀಡಿ ನಾರಾಯಣಗುರುಗಳು ಆಧ್ಯಾತ್ಮಿಕ ಸಾಧಕರಲ್ಲದೆ ಸಾಮಾಜಿಕ, ಧಾರ್ಮಿಕ ಜಾಗೃತಿ ಜೊತೆಗೆ ಧರ್ಮ ದೇವರು ಜಾತಿ ಹೆಸರಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ದ ನಾರಾಯಣಗುರುಗಳ ಶರಣಸದೃಶ ಜೀವನ ಸಾಧನೆಗಳು ಅವಿಸ್ಮರಣೀಯ ಎಂದರು.ಆರ್ಯ ಈಡಿಗರ ಸಂಘದ ಗದಗ ಜಿಲ್ಲಾ ಅಧ್ಯಕ್ಷ, ಗದಗ ಬೆಟಗೇರಿ ನಗರಸಭೈ ಮಾಜಿ ಅಧ್ಯಕ್ಷ, ಪ್ರಕಾಶ ಬೊಮ್ಮನಹಳ್ಳಿ ಮಾತನಾಡಿ, ಹಿಂದುಳಿದ ವರ್ಗದ ಏಳಿಗೆಯನ್ನು ಸದಾ ಬಯಸುವ ಪೂಜ್ಯರ ಆದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜ ಉದ್ದಾರವಾಗಬಲ್ಲದು. ಯೋಗ್ಯ ಶಿಕ್ಷಣ ನೀಡುವ ದಿಸೆಯಲ್ಲಿ ಪೊ ಷಕರ ಪಾತ್ರ ಮಹತ್ವದೆಂದು ತಿಳಿಸಿದರು.
ಈಡಿಗ ಸಮಾಜದ ತಾಲೂಕಾ ಅಧ್ಯಕ್ಷರಾದ ಗಜಾನನ ಹಾನಗಲ್, ದೊಡ್ಡಬಸಪ್ಪ ಪಲ್ಲೇದ, ಸಿದ್ಧಲಿಂಗಪ್ಪ ಕೋಣನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ, ಶಕುಂತಲಾ ಸಿಂಧೂರ, ಶಿವಾನಂದ ಗಿಡ್ನಂದಿ, ಸಂಘದ ಅಧ್ಯಕ್ಷ ಗಂಗಾಧರ ಹಿರೇಮಠ, ಪ್ರಕಾಶ ಉಗಲಾಟದ, ಸಿದ್ಧಲಿಂಗಪ್ಪ ಲಕ್ಕುಂಡಿ, ಬಸವರಾಜ ಕಾಡಪ್ಪನವರ, ಉಮೇಶ ನಾಲ್ವಾಡ, ಶಿವನಗೌಡ ಗೌಡರ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin