ಜಾಧವ್ ಕಸಾಬ್‍ಗಿಂತ ದೊಡ್ಡ ಭಯೋತ್ಪಾದಕ : ಮುಷರಫ್ ಉದ್ಧಟನತನದ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Jadav--01

ನವದೆಹಲಿ, ಮೇ 20-ಭಾರತೀಯ ನೌಕಾ ದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್, ಅಜ್ಮಲ್ ಕಸಾಬ್‍ಗಿಂತಲೂ ಅತ್ಯಂತ ದೊಡ್ಡ ಭಯೋತ್ಪಾದಕ ಎಂದು ಉದ್ಧಟತನದ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.   ಪಾಕಿಸ್ತಾನದಲ್ಲಿ ಕ್ಷಿಪ್ರ ಸೇನಾಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದಿರುವ ಹಿಂಸಾಪ್ರವೃತ್ತಿಯ ಮುಷರ್ರಫ್ ಹೇಳಿಕೆ ಖಂಡನಾರ್ಹ ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಕಟುವಾಗಿ ಟೀಕಿಸಿದೆ.ಪಾಕಿಸ್ತಾನದ ಅರೆ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಮುಷರ್ರಫ್, ಜಾಧವ್, ಕಸಾಬ್‍ಗಿಂತಲೂ ದೊಡ್ಡ ಭಯೋತ್ಪಾದಕ. ಮುಂಬೈ ದಾಳಿಯಲ್ಲಿ 164 ಜನರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನದ 10 ಉಗ್ರಗಾಮಿಗಳಲ್ಲಿ ಕಸಾಬ್ ಕೇವಲ ಒಂದು ಕಾಯಿ. ಆದರೆ ಗೂಢಚಾರನಾದ ಜಾಧವ್‍ನನ್ನು ಬಂಧಿಸದಿದ್ದರೆ ಅನೇಕ ಜನರು ಸಾವಿಗೀಡಾಗುತ್ತಿದ್ದರು ಎಂದು ಹುರುಳಿಲ್ಲದ ಹೇಳಿಕೆ ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin