ಜಾಧವ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ : ಭಾರತ ಸ್ವಾಗತ, ಪಾಕ್‍ಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Kulabhushan-Jadav-0001

ನವದೆಹಲಿ,ಮೇ 10-ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‍ರಿಗೆ ಪಾಕಿಸ್ತಾನ ಸೇನಾ ಕೋರ್ಟ್ ವಿಧಿಸಿದ್ದ ಮರಣದಂಡನೆಗೆ ಅಂತಾರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ ನೀಡಿರುವುದಕ್ಕೆ ಭಾರತ ಸ್ವಾಗತಿಸಿದೆ.   ಕುಲಭೂಷಣï ಜಾಧವ್‍ರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿದ್ದು, ಅಲ್ಲಿನ ನ್ಯಾಯಾಲಯ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ಅವರಿಗೆ ಮರಣ ದಂಡನೆ ವಿಧಿಸಿತ್ತು. ಇದಕ್ಕೆ ಭಾರತದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ ನೆದರ್ಲೆಂಡ್ ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮತ್ತೆ ಭಾರೀ ಮುಖಭಂಗ ಅನುಭವಿಸಿದೆ.ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜï, ಕುಲಭೂಷಣï ಜಾಧವ್ ಅವರ ತಾಯಿಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಕುರಿತು ಮಾಹಿತಿ ನೀಡಿದ್ದೇನೆ ಎಂದಿದ್ದಾರೆ. ಕುಲಭೂಷಣï ಜಾಧವ್ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಸುಷ್ಮಾ ಸ್ವರಾಜï ತಿಳಿಸಿದ್ದಾರೆ.
ಕುಲಭೂಷಣï ಜಾಧವ್ ಅವರನ್ನು 2006ರ ಮಾರ್ಚ್ 3ರಂದು ಬೇಹುಗಾರಿಕೆ ಹಾಗೂ ವಿಧ್ವಂಸಕ ಚಟುವಟಿಕೆಗಳ ಆರೊಪದ ಮೆಲೆ ಪಾಕ್ ಬಂಧಿಸಿತ್ತು. ಇದಾದ ಬಳಿಕ 2017 ಏಪ್ರಿಲ್ 10ರಂದು ಜಾಧವ್‍ರಿಗೆ ಪಾಕಿಸ್ತಾನ ಸೇನಾ ಕೋರ್ಟ್ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿತ್ತು.

ಜಾಧವ್ ವಿರುದ್ಧದ ಆರೊಪಗಳನ್ನು ಅಲ್ಲಗಳೆದಿದ್ದ ಭಾರತ ದೊಡ್ಡ ಮಟ್ಟದಲ್ಲಿ ಖಂಡಿಸಿ, ಪಾಕ್‍ಗೆ ಪತ್ರದ ಮೂಲಕ ಆಕ್ಷೆಪ ವ್ಯಕ್ತಪಡಿಸಿತ್ತು. ಭಾರತೀಯ ನೌಕಾದಳದ ಮಾಜಿ ಅಧಿಕಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಪಾಕï ಅಲ್ಲದೇ ಜಾಧವï ವಿರುದ್ಧದ ಆರೊಪಗಳಿಗೆ ಸಂಬಂಧಿಸಿದ ದಾಖಲೆ, ಅವರಿಗೆ ವಿಧಿಸಲಾಗಿರುವ ಶಿಕ್ಷೆಯ ತಿರ್ಪಿನ ಪ್ರತಿ, ಆರೊಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತ ಕೇಳಿತ್ತು. ಆದರೆ, ಭಾರತದ ಈ ಎಲ್ಲಾ ಮನವಿಗಳಿಗೆ ಪಾಕ್ ಸ್ಪಂದಿಸದ ಹಿನ್ನೆಲೆಯಲ್ಲಿ ಭಾರತ ಅಂತಾರಾಷ್ಟ್ರಿಯ ನ್ಯಾಯಾಲಯದ ಮೊರೆ ಹೋಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin