ಜಾಧವ್ ಪ್ರಕರಣ : ವಿಶ್ವಸಂಸ್ಥೆಗೆ ಹೊಸ ಕಡತ ಸಲ್ಲಿಸಲು ಪಾಕ್ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Jadav-012

ಇಸ್ಲಾಮಾಬಾದ್, ಏ.16- ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ನಡೆಸಿದರೆನ್ನಲಾದ ಉಗ್ರಗಾಮಿ ಚಟುವಟಿಕೆಗಳ ಕುರಿತು ವಿಶ್ವಸಂಸ್ಥೆ ಮತ್ತು ಇಸ್ಲಾಮಾಬಾದ್‍ನಲ್ಲಿರುವ ವಿದೇಶಿ ರಾಜತಾಂತ್ರಿಕರಿಗೆ ಹೊಸ ಕಡತ ಸಲ್ಲಿಸಲು ಪಾಕಿಸ್ತಾನ ಸಜ್ಜಾಗಿದೆ.  ಕರಾಚಿ ಮತ್ತು ಬಲೂಚಿಸ್ತಾನದಲ್ಲಿ ಗೂಢಚಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತಾವು ಶಾಮೀಲಾಗಿರುವ ಬಗ್ಗೆ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಮುಂದೆ ಜಾಧವ್ ನೀಡಿದ್ದಾರೆನ್ನಾದ ಹೇಳಿಕೆಗಳ ಆಧಾರದ ಮೇಲೆ ಹೊಸ ಕಡತವನ್ನು ಪಾಕಿಸ್ತಾನ ಸಿದ್ಧಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin