ಜಾನಪದ ಕೋಗಿಲೆ ಎಂದೇ ಹೆಸರಾಗಿದ್ದ ತೋಪಮ್ಮ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Topamma--01
ಚಿತ್ರದುರ್ಗ,ಮಾ.9- ಜಾನಪದ ಕೋಗಿಲೆ ಎಂದೇ ಹೆಸರಾಗಿದ್ದ ಹಿರಿಯೂರ ತಾಲ್ಲೂಕಿನ ಬಿದರ ಕೆರೆಯ ತೋಪಮ್ಮ(95) ನಿಧನರಾಗಿದ್ದಾರೆ. ತಮ್ಮ ಜಾನಪದ ಹಾಡುಗಳ ಮೂಲಕ ಜಿಲ್ಲೆಯಲ್ಲೆ ಹೆಸರು ಮಾಡಿದ್ದ ತೋಪಮ್ಮ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದರು. ಸಾವಿರಾರು ಜಾನಪದ ಗೀತೆಗಳನ್ನು ಹಾಡಿರುವ ಇವರು ಜಾನಪದ ತಜ್ಞ ಜಿ.ಶಂ.ಪರಮಶಿವಯ್ಯ, ಕೃಷ್ಣಸ್ವಾಮಿ ಹಾಗೂ ಇತರ ಕಲಾವಿದರು ಹಾಡಿರುವ ಹಾಡುಗಳನ್ನು ಸಂಗ್ರಹಿಸಿದ್ದರು. ಇವರ ಹಾಡುಗಳನ್ನು ಜಾನಪದ ಅಕಾಡೆಮಿಯಿಂದ ಪ್ರಕಟಿಸಲಾಗಿತ್ತು. ಮೃತರು ಅಂತ್ಯಕ್ರಿಯೆ ಹುಟ್ಟೂರಿನ ಬಿದರೆಕೆರೆಯಲ್ಲಿ ನಡೆಯಿತು.

Facebook Comments

Sri Raghav

Admin