ಜಾನುವಾರುಗಳಿಗೆ ಮೇವು ವಿತರಣೆ : ಶಾಸಕ ಡಿ.ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

hiriyuru-2

ಹಿರಿಯೂರು, ಮೇ 5-ತಾಲ್ಲೂಕಿನ ಮೇಟಿಕುರ್ಕೆ, ಕತ್ತೇಹೊಳೆ, ಉಡುವಳ್ಳಿ ಜೆ.ಜೆ.ಹಳ್ಳಿ, ಕೆರೆಗಳ ಅಂಗಳದಲ್ಲಿ ಮೇವು ಬೆಳೆದಿದ್ದು,  ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಮೇವು ವಿತರಣೆ ಮಾಡಲಾಗುವುದು ಎಂದು ಶಾಸಕ ಡಿ.ಸುಧಾಕರ್ ತಿಳಿಸಿದರು.ತಾಲ್ಲೂಕಿನ ಮೇಟಿಕುರ್ಕೆ ಕೆರೆ ಅಂಗಳದಲ್ಲಿ ಬೆಳೆದ ಹಸಿ ಮೇವನ್ನು ಪಾಲವ್ವನಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುತ್ತಿರುವುದು ಅರಿವಿಗೆ ಬಂದಿದೆ. ಅದಕ್ಕಾಗಿಯೇ ಕೆರೆ ಅಂಗಳದಲ್ಲಿ ಮೇವು ಬೆಳೆಯಲಾಗುತ್ತಿದೆ ಎಂದು ಹೇಳಿದರು.

ಪಾಲವ್ವನಹಳ್ಳಿ ಗ್ರಾಮದಲ್ಲಿ ಕಳೆದ 9 ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಿ.ಸಿ.ರಸ್ತೆ, ಶೌಚಾಲಯಗಳು, ಸಮುದಾಯ ಭವನಗಳು, ಅಂಬೇಡ್ಕರ್ ಭವನಗಳು, ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಟ್ಟಿತಿಪ್ಪೇಸ್ವಾಮಿ, ನಗರಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ ತಾ. ಪಂ.ಅಧ್ಯಕ್ಷ ಚಂದ್ರಪ್ಪ, ಎ.ಪಿ.ಎಂ.ಸಿ. ನಿರ್ದೇಶಕ ಶಾಂತಣ್ಣ, ತಾ. ಪಂ. ಸದಸ್ಯರಾದ ತಿಪ್ಪೇಸ್ವಾಮಿ, ಗ್ರಾಮದ ಮುಖಂಡರಾದ ಮಂಜಣ್ಣ, ವೆಂಕಟೇಶ್, ರವಿ, ಆನಂದ, ಖಲೀಲ್, ತಿಪ್ಪೇರುದ್ರಣ್ಣ, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin