ಜಾನುವಾರು ಚಿಕಿತ್ಸೆಗೆ ಉಚಿತ ಆ್ಯಂಬುಲೇನ್ಸ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

arakalagudu

ಅರಕಲಗೂಡು, ಸೆ.17- ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸಂಚಾರಿ ಪಶು ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಎ. ಮಂಜು ತಿಳಿಸಿದರು. ತಾಲೂಕಿನ ವಿಜಾಪುರ ಅರಣ್ಯ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಸಂಚಾರಿ ಪಶು ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಷಯ ತಂದು ಅನುಷ್ಠಾನಗೊಳಿಸುತ್ತಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ವಕ್ಷೇತ್ರದಲ್ಲಿಯೇ ಈ ಸೇವೆಗೆ ಚಾಲನೆ ನೀಡುತ್ತಿರುವುದು ಸಂತೋಷದ ಸಂಗತಿ, ಸಂಚಾರಿ ಆ್ಯಂಬುಲೆನ್ಸ್ ಸೇವೆ ದಿನನಿತ್ಯ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆ ವರೆಗೆ ಲಭ್ಯವಿದ್ದು ಇದಕ್ಕೆ ಕರೆ ಮಾಡಿದರೆ ವೈದ್ಯರು ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಧಾವಿಸಿ ಜಾನುವಾರುಗಳಿಗೆ ಔಷಧಿ ನೀಡುವ ಜೊತೆಗೆ ಪೂರಕ ಸಹಾಯ ನೀಡಲಿದ್ದಾರೆ. ಇದು ಉಚಿತ ಸೇವೆ ಎಂದು ವಿವಿರಿಸಿದರು.ಪಶುಪಾಲನಾ ಇಲಾಖೆಯಲ್ಲಿ ಸದ್ಯಕ್ಕೆ 650 ವೈದ್ಯರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಶೇ.3ರಷ್ಟು ವೈದ್ಯರ ಅವಶ್ಯವಿದ್ದು ಮುಂದಿನ ದಿನಗಳಲ್ಲಿ ಈ ಕೊರತೆ ನೀಗಿಸಲಾಗುವುದು ಎಂದು ಹೇಳಿದರು.

ಈ ಬಾರಿ ಮುಂಗಾರು ವೈಪಲ್ಯದ ಪರಿಣಾಮ ಮೇವಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದ್ದು ಈ ಸಮಸ್ಯೆ ನಿವಾರಣೆಗೆ ಸರಕಾರ ಇಲಾಖೆ ಮೂಲಕ ರೈತರಿಗೆ ಮೇವಿನ ಬೀಜ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಜಿಪಂ ಅಧ್ಯಕ್ಷೆ ಶ್ವೇತಾ ದದೇವರಾಜ್,ಸದಸ್ಯ ರೇವಣ್ಣ , ಜಿಪಂ ಸದಸ್ಯ ರವಿ, ತಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯೆ ವೀಣಾ ಸಿದ್ದಯ್ಯ, ಗ್ರಾಪಂ ಅಧ್ಯಕ್ಷ ವಸಂತ್‍ಕುಮಾರ್, ಉಪಾಧ್ಯಕ್ಷೆ ಪುಷ್ಪಾಲತಾ, ಮಾಗೋಡು ಬಸವರಾಜು, ವೆಂಕಟೇಶ್, ಪ್ರಮುಖರಾದ ವೆಂಕಟೇಶ್, ಶಿಕ್ಷಕ ಕುಮಾರ್ ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin