ಜಾರಿ ನಿರ್ದೇಶನಾಲಯದಿಂದ ಕರೆ ಬಂದದ್ದು ನಿಜ : ಡಿ.ಕೆ.ಶಿವಕುಮರ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು,ಆ.13- ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡುವುದಾಗಿ ಕರೆ ಬಂದಿರುವುದು ನಿಜ ಎಂದು ಇಂಧನ ಸಚಿವ ಡಿ.ಕೆ.ಶಿವಕುಮರ್ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನಗೆ ಒಂದು ಫೋನ್ ಕರೆ ಬಂದಿತ್ತು. ಕರೆ ಮಾಡಿದವರು ಜಾರಿ ನಿರ್ದೇಶನಾಲಯದಿಂದ ಎಂದು ಹೇಳಿದ್ದರು. ನಂತರ ಅದೇ ನಂಬರ್‍ಗೆ ನಾನು ಕರೆ ಮಾಡಿ ವಿಚಾರಿಸಿದ್ದೇನೆ. ಅದು ಜಾರಿ ನಿರ್ದೇಶನಾಲಯ ಎಂದು ಖಚಿತವಾಗಿದೆ ಎಂದು ಹೇಳಿದರು.

ಈ ಬಗ್ಗೆ ನಾನು ಯಾರಿಗೂ ಮಾಹಿತಿ ನೀಡಿರಲಿಲ್ಲ. ಆದರೂ ನನ್ನ ತಮ್ಮ ಡಿ.ಕೆ.ಸುರೇಶ್ ದೆಹಲಿಯಲ್ಲಿ ಇದುದ್ದರಿಂದ ಅವರಿಗೆ ಕರೆ ಮಾಡಿ ಜಾರಿ ನಿರ್ದೇಶನಾಲಯದಿಂದ ನನಗೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ. ಅದನ್ನು ವಿಚಾರಿಸು ಎಂದು ಹೇಳಿದ್ದೇನೆ ಎಂದರು.  ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದು ತಿರುಕನ ಕನಸು ಎಂದು ಯಡಿಯೂರಪ್ಪ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಅವರಿಗೆ ಯಾರನ್ನಾದರೂ ಟೀಕೆ ಮಾಡುವ ಮೊದಲು ವಿವೇಕವಿರಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಅಧಿಕಾರ ಮನೆಬಾಗಿಲಿಗೆ ಹುಡುಕಿಕೊಂಡು ಬಂದರೂ ಆಸೆಪಟ್ಟವರಲ್ಲ ಎಂದರು.

ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರಧಾನಿ ಆಗುವಂತೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿದರು. ಅದನ್ನು ನಯವಾಗಿ ತಿರಸ್ಕರಿಸಿ ಅಲ್ಪಸಂಖ್ಯಾತ ಸಮುದಾಯದ ಮನಮೋಹನ್‍ಸಿಂಗ್ ಅವರನ್ನು ಸೋನಿಯಾ ಪ್ರಧಾನಿ ಮಾಡಿದರು ಎಂದು ಹೇಳಿದರು. ನಂತರದ ದಿನಗಳಲ್ಲಿ ಮನಮೋಹನ್ ಸಿಂಗ್ ಅವರನ್ನು ಬದಿಗೆ ಸರಿಸಿ ಸಚಿವರಾಗುವ , ಪ್ರಧಾನಿಯಾಗುವ ಎಲ್ಲ ಅವಕಾಶ ಇದ್ದರೂ ರಾಹುಲ್ ಗಾಂಧಿ ಅದಕ್ಕೆ ಆಸೆಪಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು. ರಾಹುಲ್ ಗಾಂಧಿ ಪ್ರಧಾನಿ ಆಗುವುದು ಶತಸಿದ್ಧ. ಇದಕ್ಕೆ ಯಡಿಯೂರಪ್ಪ ಸೇರಿದಂತೆ ಯಾರ ಅನುಕಂಪವೂ ಬೇಕಿಲ್ಲ. ನೆಹರು ಕುಟುಂಬಕ್ಕೆ ಜನರ ಅನುಕಂಪ ಒಂದೇ ಸಾಕು ಎಂದರು.

Facebook Comments

Sri Raghav

Admin