ಜಾರ್ಖಂಡ್‍ನಲ್ಲಿ ಮತ್ತೆ ನಕ್ಸಲರ ಅಟ್ಟಹಾಸ : ರೈಲ್ವೆ ಸಿಗ್ನಲ್, ಸೆಟ್, ಎಂಜಿನ್ ಧ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

JHarkhand--01

ಬೊಕಾರೋ, ಮೇ 26-ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಾ ಯೋಧರು ಮತ್ತು ಪೊಲೀಸರಿಗೆ ಕಂಟಕಪ್ರಾಯವಾಗಿರುವ ನಕ್ಸಲರ ಅಟ್ಟಹಾಸ ಜಾರ್ಖಂಡ್‍ನಲ್ಲಿ ಮುಂದುವರಿದಿದೆ. ಬೊಕಾರೋ ಜಿಲ್ಲೆಯ ದುಮ್ರಿವಿಹಾರ್ ರೈಲು ನಿಲ್ದಾಣದ ಮೇಲೆ ಆಕ್ರಮಣ ನಡೆಸಿದ ಮಾವೋವಾದಿಗಳು ಸಂಪರ್ಕ ಸಾಧನಗಳಿಗೆ ಬೆಂಕಿ ಹಚ್ಚಿ, ರೈಲಿನ ಎಂಜಿನ್ ಧ್ವಂಸಗೊಳಿಸಿದ್ದಾರೆ.ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳು ಮತ್ತು ರೈಲು ನಿಲ್ದಾಣಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದರೂ, ಇಂದು ಮುಂಜಾನೆ ದ್ರುಮಿವಿಹಾರ್ ರೈಲು ನಿಲ್ದಾಣಕ್ಕೆ ನುಗ್ಗಿದ ಶಸ್ತ್ರಸಜ್ಜಿತ ನಕ್ಸಲರು ರೈಲ್ವೆ ನಿಯಂತ್ರಣ ಕೊಠಡಿಗೆ ನುಗ್ಗಿ ಸಿಗ್ನಲ್ ಸೆಟ್‍ಗಳು ಹಾಗೂ ಸಂಪರ್ಕ ಸಾಧನಗಳಿಗೆ ಬೆಂಕಿ ಹಚ್ಚಿದರು. ನಂತರ ಗೂಡ್ಸ್ ರೈಲಿನ ಎಂಜಿನ್‍ನನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಈ ಘಟನೆ ನಡೆದಾಗ ರೈಲು ನಿಲ್ದಾಣದಲ್ಲಿ ಹೆಚ್ಚು ಜನರು ಇರಲಿಲ್ಲ. ಹೀಗಾಗಿ ಸಾವು-ನೋವು ತಪ್ಪಿದಂತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin