ಜಾಹೀರಾತು ಮೂಲಕ 10.000 ಕೋಟಿ ಆದಾಯ ಗಳಿಕೆಗೆ ಭಾರತೀಯ ರೈಲ್ವೆ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Indian-Railway--01

ನವದೆಹಲಿ, ಏ.24-ದೇಶಾದ್ಯಂತ ರೈಲು ನಿಲ್ಧಾಣಗಳ ಪ್ಲಾಟ್‍ಫಾರಂಗಳಲ್ಲಿ ಎರಡು ಲಕ್ಷ ಡಿಜಿಟಲ್ ಪರದೆಗಳನ್ನು ಅಳವಡಿಸಿ ಜಾಹೀರಾತು ಮೂಲಕ 10,000 ಕೋಟಿ ರೂ.ಗಳ ವರಮಾನ ಗಳಿಸಲು ಭಾರತೀಯ ರೈಲ್ವೆ ಮಹತ್ವದ ಯೋಜನೆ ರೂಪಿಸಿದೆ. ಈ ಬೃಹತ್ ಜಾಹೀರಾತು ಗುರಿಯು ಮುಂದಿನ 10 ವರ್ಷಗಳಲ್ಲಿ ಸಾಕಾರಗೊಳ್ಳಲಿದೆ.  ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಸದ್ಯದಲ್ಲೇ ಬೃಹತ್ ಡಿಜಿಟಲ್ ಸ್ಕ್ರೀನ್‍ಗಳು ರಾರಾಜಿಸಲಿದೆ. ಪ್ರಯಾಣಿಕರಿಗೆ ರೈಲು ಸಂಚಾರಗಳ ಮಾಹಿತಿ, ಆಗಮನ-ನಿರ್ಗಮನ ವೇಳಾಪಟ್ಟಿಯೊಂದಿಗೆ ಜಾಹೀರಾತುಗಳ ಮೂಲಕ ದೊಡ್ಡ ಮಟ್ಟದ ಆದಾಯ ಗುರಿ ಹೊಂದಲಾಗಿದೆ.ಟಿಕೆಟ್ ರಹಿತ ಮೂಲಗಳಿಂದ ಹಣವನ್ನು ಕ್ರೋಢೀಕರಿಸಲು ಇದೊಂದು ಮಹತ್ವದ ಅಂಕಣವಾಗಿದೆ ಎಂಬುದು ರೈಲ್ ಡಿಸ್‍ಪ್ಲೇ ನೆಟ್‍ವರ್ಕ್ (ಆರ್‍ಡಿಎನ್) ಜಾಲಕ್ಕೆ ಮನವರಿಕೆಯಾಗಿದೆ. ಅಲ್ಲದೇ, ಈ ಯೋಜನೆ ಪ್ರಯಾಣಿಕರೊಂದಿಗಿನ ಸಂಪರ್ಕವನ್ನು ಮತ್ತಷ್ಟು ಬಲಗೊಳಿಸುತ್ತದೆ. ಈ ಯೋಜನೆಯಲ್ಲಿ ಭಾಗವಹಿಸಲು ಗೂಗಲ್‍ನಂಥ ಹಲವಾರು ಜಾಗತಿಕ ಕಂಪೆನಿಗಳು ಆಸಕ್ತಿ ತೋರಿದ್ದು, ಜಾಹೀರಾತು ತಂತ್ರಜ್ಞಾನ ವಿನ್ಯಾಸಗೊಳಿಸಲು ಸಹಕಾರಿಯಾಗಿದೆ.

ಹಾಗೆಯೇ, ಮೈಕ್ರೋಸಾಫ್ಟ್ ಮತ್ತು ರಿಲಾಯನ್ಸ್ ಸಂಸ್ಥೆಗಳೂ ಇದರಲ್ಲಿ ಕೈಜೋಡಿಸಲು ಉತ್ಸುಕವಾಗಿವೆ. ಟೆಲಿವಿಷನ್ ಹೊರತುಪಡಿಸಿದಂತೆ ಇದು ಅತಿದೊಡ್ಡ ಜಾಹೀರಾತು ಅಂಕಣವಾಗುವ ನಿರೀಕ್ಷೆ ಇದೆ ಎಂದು ರೈಲ್ವೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin