ಜಿಎಸ್ಟಿಯಿಂದ ಸರಕು ಮತ್ತು ಸೇವೆಗಳ ದರ ಕಡಿಮೆಯಾಗಲಿದೆ : ಋತ್ವಿಕ್ ಪಾಂಡೆ

ಈ ಸುದ್ದಿಯನ್ನು ಶೇರ್ ಮಾಡಿ
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಎಫ್ಕೆಸಿಸಿಐ ವತಿಯಿಂದ ಹಮ್ಮಿಕೊಂಡಿದ್ದ ಜಿಎಸ್ಟಿ-ಮುನ್ನಡೆ ಕುರಿತ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಋತ್ವಿಕ್ ಪಾಂಡೆ ಅವರನ್ನು ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್, ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಬಿ.ವಿ.ಮುರಳಿ ಕೃಷ್ಣ, ಕೆ.ಎಸ್.ಬಸವರಾಜು ಮತ್ತಿತರರು ಹಾಜರಿದ್ದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಎಫ್ಕೆಸಿಸಿಐ ವತಿಯಿಂದ ಹಮ್ಮಿಕೊಂಡಿದ್ದ ಜಿಎಸ್ಟಿ-ಮುನ್ನಡೆ ಕುರಿತ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಋತ್ವಿಕ್ ಪಾಂಡೆ ಅವರನ್ನು ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್, ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಬಿ.ವಿ.ಮುರಳಿ ಕೃಷ್ಣ, ಕೆ.ಎಸ್.ಬಸವರಾಜು ಮತ್ತಿತರರು ಹಾಜರಿದ್ದರು.

ಬೆಂಗಳೂರು,ಆ.22-ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಜಾರಿಗೆ ಬಂದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸುಮಾರು 16-17 ತೆರಿಗೆಗಳು ವಿಲೀನಗೊಂಡು ಸರಕು ಮತ್ತು ಸೇವೆಗಳ ದರ ಕಡಿಮೆಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಋತ್ವಿಕ್ ಪಾಂಡೆ ತಿಳಿಸಿದರು. ಎಫ್ಕೆಸಿಸಿಐ ಮತ್ತು ಮಾಧ್ಯಮ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಜಾರಿಗೆ ಬರಲಿರುವ ತೆರಿಗೆ ಪದ್ಧತಿಯಿಂದ ಬಹಳಷ್ಟು ಸರಕು ಮೇಲಿನ ಬೆಲೆ ಕಡಿಮೆಯಾಗಲಿದೆ. ಆದರೆ ಯಾವ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂಬ ಅಂದಾಜು ಇನ್ನು ಸಿಕ್ಕಿಲ್ಲ. ಜಿಎಸ್ಟಿ ಪರಿಷತ್ ತೆರಿಗೆ ಪ್ರಮಾಣವನ್ನು ನಿಗದಿ ಮಾಡಿರುವ ಸರಕು ಸೇವೆಗೆ ಎಷ್ಟರಮಟ್ಟಿಗೆ ತೆರಿಗೆ ವಿಧಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿದೆ.

ಈಗ 31ರಷ್ಟು ಕಾಯ್ದೆ ತೆರಿಗೆಗೆ ಸಂಬಂಧಪಟ್ಟಂತೆ ಇದೆ. ಇವುಗಳನ್ನು ರದ್ದುಗೊಳಿಸಲಾಗುವುದು. ಪ್ರಸ್ತುತ ವ್ಯವಸ್ಥೆಯಲ್ಲಿ ಉತ್ಪಾದನೆ ಜಾಗದಿಂದ ಸರಕು ಹೊರಬರುತ್ತಿದ್ದಂತೆ ಅದಕ್ಕೆ ಕೇಂದ್ರ ಅಬಕಾರಿ ತೆರಿಗೆ ಸೇರ್ಪಡೆಯಾಗುತ್ತದೆ. ಆನಂತರ ಸರಕು ಸಾಗಾಣಿಕೆ ತೆರಿಗೆ, ಪ್ರವೇಶ ತೆರಿಗೆ, ಮಾರಾಟ ತೆರಿಗೆ ವಿಧಿಸಲಾಗುತ್ತಿದೆ ಹಾಗಾಗಿ ವಸ್ತುಗಳ ಬೆಲೆ ದುಬಾರಿಯಾಗಿದೆ.
ದುಬಾರಿ ಬೆಲೆಗೆ ವಿನಾಯ್ತಿ ಸಿಕ್ಕಿ ಏಕರೂಪ ತೆರಿಗೆ ಪದ್ಧತಿ ಜಾರಿಗೆ ಬರುವುದರಿಂದ ಉತ್ಪಾದಕರು, ಮಾರಾಟಗಾರರು ಮತ್ತು ಗ್ರಾಹಕರಿಗೆ ಲಾಭವಾಗಲಿದೆ ಎಂದು ಹೇಳಿದರು.
ಜಿಎಸ್ಟಿ ನಂತರ ರಾಜ್ಯ ಸರ್ಕಾರಕ್ಕೆ ತೆರಿಗೆ ನಷ್ಟದಿಂದಾಗುವ ಆದಾಯ ಕೊರತೆಯ ಬಗ್ಗೆ ಯಾವುದೇ ಅಂದಾಜು ನಡೆದಿಲ್ಲ. ಈಗಿನ ಸಂದರ್ಭದಲ್ಲಿ ಅದನ್ನು ಲೆಕ್ಕ ಹಾಕುವುದು ಕಷ್ಟ. ಆದರೆ ಕಳೆದ ಐದು ವರ್ಷದಿಂದ ಸಂಗ್ರಹವಾಗಿರುವ ತೆರಿಗೆ ಪ್ರಮಾಣದ ಸರಾಸರಿ ಲೆಕ್ಕ ತೆಗೆದುಕೊಂಡು ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹದಲ್ಲಿ ಕಡಿಮೆಯಾದರೆ ಹೆಚ್ಚುವರಿ ನಷ್ಟವನ್ನು ಕೇಂದ್ರ ಸರ್ಕಾರ ಮುಂದಿನ ಐದುವರೆ ವರ್ಷಗಳಲ್ಲಿ ತುಂಬಿಕೊಡಲಿದೆ.

ಈ ಹಿಂದೆ ವ್ಯಾಟ್ ಜಾರಿಯಾದಾಗಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊರತೆಯಾಗುವುದಿಲ್ಲ. ಸೇವಾ ತೆರಿಗೆಯಲ್ಲಿ ಮಾತ್ರ ಸ್ವಲ್ಪ ಏರುಪೇರಾಗುವ ಸಾಧ್ಯತೆಯಿದೆ. ಪ್ರಸ್ತುತ ಸೇವಾ ತೆರಿಗೆ ಶೇ.16 ರಷ್ಟಿದ್ದು , ಜಿಎಸ್ಟಿ ಶೇ.18ರಷ್ಟಾದರೆ ಶೇ.2ರಷ್ಟು ಹೆಚ್ಚುವರಿ ಹೊರೆಯಾಗುವ ಸಾಧ್ಯತೆಯಿದೆ.
ಹಳೆಯ ತೆರಿಗೆ ಪದ್ದತಿಗಳ ಮೇಲೆ ಸಮಗ್ರ ಪರಿಷ್ಕರಣೆ ನಡೆಯುವ ಸಂಭವವಿದೆ. ಫೋಟೋಗ್ರಫಿಯನ್ನು ಈ ಹಿಂದೆ ಸರಕು ಸೇವೆಗಳ ವ್ಯಾಪ್ತಿಗೆ ತರಲಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ವ್ಯಾಜ್ಯ ನಡೆದಿದೆ. ಸುಪ್ರೀಂಕೋರ್ಟ್ ಸೇವಾ ತೆರಿಗೆ ಎಂದಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಇದನ್ನು ಸರಕು ಸೇವೆ ಎಂದು ಪರಿಗಣಿಸಿತು. ಆದರೆ ಈಗ ಬಹುತೇಕ ಫೋಟೋಗ್ರಫಿ ವಾಣಿಜ್ಯೀಕರಣವಾಗಲೇ ಸಾಧ್ಯವಿಲ್ಲ. ಎಲ್ಲ ಮೊಬೈಲ್ಗಳಲ್ಲೂ ಫೋಟೊ ತೆಗೆಯಬಹುದಾಗಿದ್ದು, ತೆರಿಗೆ ವಿಧಿಸಲಾಗುವುದಿಲ್ಲ. ಇಂತಹ ಹಲವಾರು ನಿಯಮ ಬದಲಾವಣೆ ಮಾಡಬೇಕಿದೆ ಎಂದರು.

ದೊಡ್ಡಮಟ್ಟದ ಸರಕು ಸಾಗಾಣಿಕೆ ತೆರಿಗೆ ವಿಧಿಸುವುದನ್ನು ಬದಲಾಯಿಸಿ ಈ-ಕಾಮರ್ಸ್ ಕಂಪನಿಗಳಿಗೆ ಶೇ.1ರಷ್ಟು ತೆರಿಗೆ ಹಾಕುತ್ತಿದ್ದು, ಅದನ್ನು ಜಿಎಸ್ಟಿಯಲ್ಲಿ ಸ್ಪಷ್ಟಪಡಿಸುವ ಸಾಧ್ಯತೆ ಇದೆ.
ಧಾನ್ಯ, ದಿನನಿತ್ಯದ ವಸ್ತುಗಳು ಹಾಗೂ ಇನ್ನಿತರ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಬೇರೆ ಬೇರೆ ತೆರಿಗೆಗಳು ಕಡಿತಗೊಂಡು ದಿನನಿತ್ಯದ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಜೊತೆಗೆ ಉತ್ಪಾದನೆ ಸಹ ಹೆಚ್ಚಾಗಲಿದೆ.  ಬಹಳಷ್ಟು ಜನ ತೆರಿಗೆ ತಪ್ಪಿಸುವವರು ಜಿಎಸ್ಟಿ ಜಾರಿಗೆ ನಂತರ ತೆರಿಗೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು.   ಎಫ್ಕೆಸಿಸಿಐ ಅಧ್ಯಕ್ಷ ಎಂ.ಪಿ.ದಿನೇಶ್, ಕಾರ್ಯದರ್ಶಿ ಪಾರ್ಥಸಾರಥಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಶಂಕರಪ್ಪ , ಸದಸ್ಯರಾದ ರುದ್ರಣ್ಣ ಹರ್ತಿಕೋಟೆ, ಪತ್ರಕರ್ತರಾದ ರಾಜ ಶೈಲೇಶ ಚಂದ್ರಗುಪ್ತ, ವಾಣಿಜ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin