ಜಿಎಸ್‍ಟಿ ಅನಿವಾರ್ಯ, ಎಲ್ಲರೂ ಹೊಂದಿಕೊಳ್ಳಲೇಬೇಕು : ಅರುಣ್ ಜೇಟ್ಲಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

GST-Arun--01

ಬೆಂಗಳೂರು, ಮೇ 29-ಜುಲೈ 1 ರಿಂದ ಅನುಷ್ಠಾನವಾಗುತ್ತಿರುವ ಸರಕು-ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‍ಟಿ)ಗೆ ಅಧಿಕಾರಿಗಳು ಮತ್ತು ತೆರಿಗೆದಾರರು ಹೊಂದಿಕೊಳ್ಳಲೇಬೇಕಾಗಿದೆ ಎಂದು ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಇಂದಿಲ್ಲಿ ಹೇಳಿದರು. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಕೇಂದ್ರ ಅಬಕಾರಿ ಸೀಮಾ ಶುಲ್ಕ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಎಸ್‍ಟಿ ಜಾರಿಯಲ್ಲಿ ಯಾವುದೇ ರಾಜೀ ಇಲ್ಲ. ಹೊಸ ತೆರಿಗೆ ಪದ್ಧತಿಗೆ ತೆರಿಗೆದಾರರು, ಅನುಷ್ಠಾನಗೊಳಿಸುವ ಅಧಿಕಾರಿಗಳು ಹೊಂದಿಕೊಳ್ಳಬೇಕಾಗಿದೆ ಎಂದರು.ಸರಕು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆ ಜಾರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆ ಅಗತ್ಯವಾಗಿದೆ. ಎಲ್ಲಾ ತೆರಿಗೆ ತರಬೇತಿ ಕೇಂದ್ರಗಳು ಉತ್ತಮವಾಗಿ ಪಾತ್ರ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.  ವಿಶೇಷವಾಗಿ ಬೆಂಗಳೂರಿನ ಕೇಂದ್ರದಲ್ಲಿ ತರಬೇತಿ ಪಡೆದವರು ದೇಶಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದು ಜೇಟ್ಲಿ ಪ್ರಶಂಸಿಸಿದರು. ದೇಶದ ಸರ್ವತೋಮುಖ ಅಭಿವೃದ್ಧಿಗೆ ಜಿಎಸ್‍ಟಿ ಬಹಳ ಪ್ರಮುಖವಾಗಿದ್ದು, ಇದರ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ. ಎಲ್ಲಾ ರಾಜ್ಯ ಸರ್ಕಾರಗಳು ಕೈ ಜೋಡಿಸಲಿವೆ ಎಂದು ಅವರು ಹೇಳಿದರು.

ಜಿಎಸ್‍ಟಿ ಸಮರ್ಪಕ ಅನುಷ್ಠಾನ ದೇಶದ ಪ್ರಗತಿಗೆ ಪೂರಕವಾಗಿದೆ. ಹೀಗಾಗಿಯೇ ಸಾಧಕ-ಬಾಧಕಗಳನ್ನು ಚರ್ಚಿಸಿ ಏಕರೂಪ ತೆರಿಗೆ ಪದ್ಧತಿಯನ್ನು ಜು.1 ರಿಂದ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಜೇಟ್ಲಿ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin