ಜಿಎಸ್‍ಟಿ, ಅಮಾನ್ಯೀಕರಣ ಅಪೇಕ್ಷಿತ ಫಲ ನೀಡುತ್ತಿದೆ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly--0121

ವಾಷಿಂಗ್ಟನ್, ಅ.8-ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ಸ್ಚಚ್ಚ ಭಾರತದಂಥ ಸರ್ಕಾರದ ಉಪಕ್ರಮಗಳು ಅಪೇಕ್ಷಿತ ಮತ್ತು ನಿರೀಕ್ಷಿತ ಫಲ ನೀಡುತ್ತಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಬರ್ಕೆಲಿ ಇಂಡಿಯಾ ಸಮಾವೇಶದಲ್ಲಿ ವೀಡಿಯೋ ಕಾನ್ಪೆರನ್ಸ್ ಮೂಲಕ ಪ್ರಸ್ತಾವಿಕ ಭಾಷಣ ಮಾಡಿದ ಅವರು, ಜಿಎಸ್‍ಟಿಯಿಂದ ಸಾಕಷ್ಟು ತೆರಿಗೆ ಸುಧಾರಣೆ ಕಂಡುಬಂದಿದ್ದು, ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕತೆಗೆ ಸ್ಥಿರತೆ ನೀಡಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೈಗೊಂಡ ಈ ಮಹತ್ವದ ಯೋಜನೆಗಳಿಗೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಭಾರತ ಮತ್ತೆ ಪ್ರಗತಿ ಶ್ರೇಣಿಯಲ್ಲಿ ಶೀರ್ಘ ಮುಂಚೂಣಿಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಜೇಟ್ಲಿ ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin