ಜಿಎಸ್‍ಟಿ ಜಾರಿಗೆ ರಾಜ್ಯ ಸರ್ಕಾರ ಸಿದ್ಧವಾಗಿದೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

asdfgSGSGಬೆಂಗಳೂರು, ಆ.4- ಸರಕು ಮತ್ತು ಸೇವೆಗಳ ತೆರಿಗೆ ಪದ್ಧತಿ(ಜಿಎಸ್‍ಟಿ) ಯುಪಿಎ ಸರ್ಕಾರದ ಕೂಸು. ಅದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,  ಜಿಎಸ್‍ಟಿ ಕಾಯ್ದೆಯನ್ನು ತಯಾರಿಸಿದ್ದು ಹಾಗೂ ರೂಪಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲೇ. ಯುಪಿಎ ಸರ್ಕಾರ ಈ ಕಾಯ್ದೆಯನ್ನು ಎಂದಿಗೂ ವಿರೋಧಿಸಿರಲಿಲ್ಲ. ಅದರ ಕೆಲ ತಿದ್ದುಪಡಿಗೆ ಸಲಹೆ ನೀಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಕಾಯ್ದೆಯನ್ನು ವಿರೋಧಿಸಿದ್ದರು ಎಂದು ಹೇಳಿದರು.
150 ದೇಶಗಳಲ್ಲಿ ಜಿಎಸ್‍ಟಿ ಕಾಯ್ದೆ ಇದೆ. ಅಲ್ಲೆಲ್ಲಾ ತೆರಿಗೆ ಪ್ರಮಾಣ ಶೇ.14ರಿಂದ 16ಕ್ಕೆ ಸೀಮಿತವಾಗಿದೆ. ನಮ್ಮ ದೇಶದಲ್ಲಿ ಅದರ ಪ್ರಮಾಣ ಶೇ.18ಕ್ಕಿಂತ ಹೆಚ್ಚಾಗಬಾರದು ಎಂಬುದು ಕಾಂಗ್ರೆಸ್‍ನ ವಾದ. ನಿನ್ನೆ ರಾಜ್ಯ ಸಭೆಯಲ್ಲಿ ಕಾಯ್ದೆ ಅಂಗೀಕಾರಗೊಳ್ಳುವ ಮುನ್ನ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಜಿಎಸ್‍ಟಿಯಲ್ಲಿನ ಬದಲಾವಣೆಗಳ ಬಗ್ಗೆ ಸಮಗ್ರ ವಿವರಣೆ ನೀಡಿದ್ದಾರೆ.
ತೆರಿಗೆ ಪ್ರಮಾಣ ಶೇ.18ಕ್ಕಿಂತ  ಒಳಗಿರಬೇಕು ಎಂಬುದು ನಮ್ಮ ಒತ್ತಾಸೆಯಾಗಿತ್ತು. ಕಾಂಗ್ರೆಸ್ ಸೂಚಿಸಿದ ಬದಲಾವಣೆಗಳನ್ನು ಮಾಡುವುದಾಗಿ ಕೇಂದ್ರದ ಆರ್ಥಿಕ ಸಚಿವ ಅರುಣ್‍ಜೇಟ್ಲಿ ಒಪ್ಪಿದ್ದಾರೆ. ಹೀಗಾಗೆ ನಿನ್ನೆ ಮಸೂದೆ ಅಂಗೀಕಾರಗೊಂಡಿದೆ ಎಂದು ಹೇಳಿದ ಸಿದ್ದರಾಮಯ್ಯ,  ಇದನ್ನು ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin