ಜಿಎಸ್‍ಟಿ ಜಾರಿ : ಬಿಲ್ ಮಾಡಲು ಪರದಾಡಿದ ವರ್ತಕರು

ಈ ಸುದ್ದಿಯನ್ನು ಶೇರ್ ಮಾಡಿ

GST--01

ಬೆಂಗಳೂರು, ಜು.1- ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಿಎಸ್‍ಟಿ ಜಾರಿ ಯಾದ ಹಿನ್ನೆಲೆಯಲ್ಲಿ ಸಾರ್ವ ಜನಿಕರಿಗೆ ಬೆಳ್ಳಂಬೆಳಗ್ಗೆ ದರ ಏರಿಕೆಯ ಬಿಸಿ ತಟ್ಟಿತು.
ವರ್ತಕರು, ಮಾಲೀಕರಿಗೆ ಬಿಲ್ ಮಾಡುವ ಗೊಂದಲ ಉಂಟಾ ಯಿತು, ನಿನ್ನೆ ಮಧ್ಯರಾತ್ರಿ ದೇಶಾದ್ಯಂತ ಜಿಎಸ್‍ಟಿ ಜಾರಿ ಮಾಡುವ ಐತಿಹಾಸಿಕ ನಿರ್ಧಾರ ವನ್ನು ಲೋಕಸಭೆಯ ಸೆಂಟ್ರಲ್ ಹಾಲ್‍ನಲ್ಲಿ ಪ್ರಕಟಿಸಲಾಯಿತು.  ದೇಶಾದ್ಯಂತ ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಾರಿಯಾಗುತ್ತಿದ್ದಂತೆ ಹೋಟೆಲ್, ಮಾಲ್‍ಗಳು, ಮೊಬೈಲ್ ಅಂಗಡಿಗಳು, ಸೂಪರ್ ಮಾರ್ಕೆಟ್, ಚಿನ್ನಾಭರಣ ಅಂಗಡಿ, ಮೆಡಿಕಲ್ ಸ್ಟೋರ್‍ಗಳು, ಎಪಿಎಂಸಿ ಮಾರುಕಟ್ಟೆ, ಹಲವು ಕಂಪೆನಿಗಳು, ಉತ್ಪಾದನಾ ವಲಯ ಸೇರಿದಂತೆ ಎಲ್ಲೆಡೆ ಜಿಎಸ್‍ಟಿಯದ್ದೇ ಚರ್ಚೆ ನಡೆಯುತ್ತಿತ್ತು.

ಇಂದು ಬೆಳಗ್ಗೆ ಹೋಟೆಲ್‍ಗೆ ಹೋದವರಿಗೆ ಬಿಲ್‍ನಲ್ಲಿ ಜಿಎಸ್‍ಟಿ ತೆರಿಗೆ ಎಂಟ್ರಿ ಆಗಿತ್ತು. ಕಾಫಿ, ತಿಂಡಿ ತಿಂದವರಿಗೆ ಜಿಎಸ್‍ಟಿ ಶುಲ್ಕ ವಿಧಿಸಲಾಗಿತ್ತು. ಗ್ರಾಹಕರಿಗೆ ಹೊರೆ ಎನಿಸುತ್ತಿತ್ತು. ಮಾಲೀಕರಿಗೆ ಅನಿವಾರ್ಯವಾಗಿತ್ತು. ನಮ್ಮ ಗ್ರಾಹಕರನ್ನು ಎಲ್ಲಿ ಕಳೆದುಕೊಳ್ಳು ತ್ತೇವೆಯೋ ಎಂಬ ಆತಂಕ ಹೋಟೆಲ್ ಮಾಲೀಕರನ್ನು ಕಾಡು ತ್ತಿತ್ತು. ಕೆಲವು ಹೋಟೆಲ್‍ಗಳಲ್ಲಿ ಜಿಎಸ್‍ಟಿ ಶುಲ್ಕು ವಿಧಿಸಿರಲಿಲ್ಲ. ಹೋಟೆಲ್‍ಗಳ ತಿಂಡಿ, ಕಾಫಿಗಳ ಮೇಲೂ ತೆರಿಗೆ ಕಟ್ಟಬೇಕಂತೆ ಅಲ್ಲೋದ್ರೆ ಮತ್ತೆ ಬಿಲ್ ಹೆಚ್ಚಾಗುತ್ತೆ ಎಂದು ಹಲವರು ಫುಟ್‍ಬಾತ್ ತಿಂಡಿಗೆ ಮೊರೆ ಹೋಗಿದ್ದರು.

ಇನ್ನು ಚಲನಚಿತ್ರ ಮಂದಿರಗಳಲ್ಲಿ ಹಲವೆಡೆ ಜಿಎಸ್‍ಟಿ ಸೇರಿಸಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದರು. ಮತ್ತೆ ಕೆಲವೆಡೆ ಟಿಕೆಟ್ ದರ ಇಳಿಸಿ ಜಿಎಸ್‍ಟಿ ಸೇರಿಸಿ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವ ಕೆಲಸವನ್ನು ಚಿತ್ರಮಂದಿರದವರು ಮಾಡುತ್ತಿದ್ದರು.  ಬಿಗ್‍ಬಜಾರ್, ಸೂಪರ್‍ಮಾರ್ಕೆಟ್, ಶಾಫರ್ ಸ್ಟಾಪ್ ಮುಂತಾದ ಮಾಲ್‍ಗಳಲ್ಲಿ ಎಂದಿನಂತೆ ಖರೀದಿ ಬರಾಟೆ ಇತ್ತಾದರೂ ಬಿಲ್‍ಗಳ ಮೇಲೆ ಸ್ಟೇಟ್ ಜಿಎಸ್‍ಟಿ, ಸೆಂಟ್ರಲ್ ಜಿಎಸ್‍ಟಿ ವಿಧಿಸಲಾಗುತ್ತಿತ್ತು. ಇನ್ನೂ ಕೆಲವು ಕಡೆ ಹೊಸ ತೆರಿಗೆ ಪದ್ಧತಿಯನ್ನು ಸಿಸ್ಟಮ್‍ಗೆ ಅಳವಡಿಸುವಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಹಲವು ಕಚೇರಿ ಗಳು, ಕಂಪೆನಿಗಳಲ್ಲಿ ಸಿಸ್ಟಮ್ ರೀ ಅಪ್ ಡೇಟ್ ಮಾಡುವಲ್ಲಿ ತೊಡಗಿದ್ದರು.

ಪೇಯಿಂಟ್, ಸಿಮೆಂಟ್, ಕಬ್ಬಿಣ, ಎಲೆಕ್ಟ್ರಾನಿಕ್ ಗೂಡ್ಸ್, ಕಟ್ಟಡ ನಿರ್ಮಾಣ ಸಾಮಗ್ರಿಗಳ ಖರೀದಿಯ ಮೇಲೂ ಜಿಎಸ್‍ಟಿ ದಾಖಲಾಗುತ್ತಿದೆ. ವಾಣಿಜ್ಯ ತೆರಿಗೆ ಕೇಂದ್ರ ಕಚೇರಿಗಳು ಸಾಕಷ್ಟು ಬ್ಯುಸಿಯಾಗಿದ್ದವು. ಗೊಂದಲ ನಿವಾರಣೆಗಾಗಿ ಕಚೇರಿಗೆ ಫೋನ್‍ಗಳು ರಿಂಗುಣಿಸುತ್ತಿದ್ದವು. ತೆರಿಗೆ ಗೊಂದಲ ಪರಿಹರಿಸಿ ಕೊಳ್ಳಲು ತಮ್ಮ ಆಡಿಟರ್‍ಗಳ ಮೊರೆ ಹೋಗಿದ್ದರು. ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ದೇಶಾದ್ಯಂತ ಜಾರಿ ಯಾಗಿರುವುದು ನಮಗೇನು ದೊಡ್ಡದಾಗುವುದಿಲ್ಲ. ನಾವೂ ಕೂಡ ಪಾಲಿಸಲೇಬೇಕೆಂದು ಬಹುತೇಕ ಜನ ಜಿಎಸ್‍ಟಿ ಅಳವಡಿಸುವಲ್ಲಿ ತೊಡಗಿದ್ದರು.  ಒಟ್ಟಾರೆ ಜಿಎಸ್‍ಟಿಯಿಂದ ಕೆಲವೆಡೆ ಗೊಂದಲ ಸೃಷ್ಟಿಸಿದರೆ, ಮತ್ತೆ ಕೆಲವೆಡೆ ಬೇಸರಕ್ಕೂ ಕಾರಣವಾಯಿತು, ಇನ್ನೊಂದೆಡೆ ಈ ಪರಿಸ್ಥಿತಿಗೆ ಹೊಂದಿ ಕೊಳ್ಳುವ ಅನಿವಾರ್ಯತೆ ಉಂಟಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin