ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲಿಯಂ, ಅಬಕಾರಿ, ರಿಯಲ್‍ಎಸ್ಟೇಟ್, ವಿದ್ಯುತ್

ಈ ಸುದ್ದಿಯನ್ನು ಶೇರ್ ಮಾಡಿ

GSt-011

ಬೆಂಗಳೂರು,ಜು.14-ಪೆಟ್ರೋಲಿಯಂ, ರಿಯಲ್ ಎಸ್ಟೇಟ್ , ವಿದ್ಯುತ್, ಅಬಕಾರಿ ವ್ಯಾಪ್ತಿಯ ತೆರಿಗೆಗಳನ್ನು ಮುಂದಿನ ಐದರಿಂದ 10 ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಡಿ(ಜಿಎಸ್‍ಟಿ) ತರಲಾಗುವುದು ಎಂದು ವಾಣಿಜ್ಯ ತೆರಿಗೆ ಮಾಜಿ ಜಂಟಿ ಆಯುಕ್ತ ಸುಬ್ರಯ್ಯ ಎಂ.ಹೆಗಡೆ ತಿಳಿಸಿದರು.
ಅಮೃತ ವಿವಿಯ ಆಡಳಿತ ವಿಭಾಗ ತಮ್ಮ ಕ್ಯಾಂಪಸ್‍ನಲ್ಲಿ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜಿಎಸ್‍ಟಿಯನ್ನು ಜುಲೈ 1ರಂದು ಜಾರಿಗೆ ತಂದಿದ್ದು , ಪೆಟ್ರೋಲಿಯಂ, ರಿಯಲ್ ಎಸ್ಟೇಟ್ , ವಿದ್ಯುತ್, ಅಬಕಾರಿ ವ್ಯಾಪ್ತಿ ತೆರಿಗೆಯನ್ನು ಜಿಎಸ್‍ಟಿಯಿಂದ ಹೊರಗಿಡಲಾಗಿತ್ತು.

ಮುಂಬರುವ ವರ್ಷಗಳಲ್ಲಿ ಈ ಜಿಎಸ್‍ಟಿಗೆ ಒಳಪಡಿಸಲಾಗುವುದು ಎಂದರು.  ಜಿಎಸ್‍ಟಿ ಎಂದರೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ . ಇದು ದೇಶದ ಅರ್ಥವ್ಯವಸ್ಥೆಯ ಜಿಡಿಪಿ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ವರ್ಷಗಳಲ್ಲಿ ದೇಶದ ಜಿಡಿಪಿ ಹೆಚ್ಚಾಗಲಿದ್ದು , ಇದರಿಂದ ದೇಶ ಇನ್ನಷ್ಟು ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.  ರಾಜ್ಯದಲ್ಲಿ ಒಟ್ಟು 60 ಲಕ್ಷ ಡೀಲರ್‍ಗಳಿದ್ದಾರೆ. ಜಿಎಸ್‍ಟಿ ವ್ಯಾಪ್ತಿಯಲ್ಲಿ ಏಕರೂಪ ತೆರಿಗೆ ಇರುವುದರಿಂದ ಉತ್ಪಾದನೆ ಹೆಚ್ಚಾಗಲಿದೆ. ಇದರಿಂದ ವರ್ತಕರು ಹೆಚ್ಚಿನ ಲಾಭ ಗಳಿಸಬಹುದು. ಇದಕ್ಕೂ ಮುನ್ನ ನಾನಾ ತೆರಿಗೆಗಳನ್ನು ಪಾವತಿ ಮಾಡಬೇಕಿತ್ತು. ಈಗ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

ಡಾ.ಖೇಲ್ಕರ್ ನೇತೃತ್ವದ ತಂಡ ಜಿಎಸ್‍ಟಿ ಬಗ್ಗೆ ರೂಪುರೇಷೆಗಳನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಜು.1ರಂದು ದೇಶದ ಆರ್ಥಿಕ ವ್ಯವಸ್ಥೆಗೆ ಕ್ರಾಂತಿಕಾರಕವಾದ ಜಿಎಸ್‍ಟಿಯನ್ನು ಜಾರಿಗೆ ತಂದಿದ್ದಾರೆ ಎಂದರು.
ವಾಣಿಜ್ಯ ತೆರಿಗೆಯ ಉಪ ಆಯುಕ್ತ ಬಸವರಾಜ್ ಮಾತನಾಡಿ, ಆನ್‍ಲೈನ್ ಮೂಲಕ ಜಿಎಸ್‍ಟಿ ನೋಂದಣಿ ಮಾಡಿಕೊಳ್ಳಬೇಕು. ಸಣ್ಣ ವರ್ತಕರು ಬೇರೆಯವರ ಮಾತಿಗೆ ಕಿವಿಕೊಡದೆ ಆನ್‍ಲೈನ್ ರಿಜಿಸ್ಟರ್ ಮಾಡಿಕೊಂಡರೆ ಸರ್ಕಾರದ ವತಿಯಿಂದ ಇದಕ್ಕೆ ಸಂಬಂಧಿಸಿದಂತೆ ಸಂಖ್ಯೆಗಳನ್ನು ನೀಡಲಾಗುವುದು. ಇದರ ಮೇಲೆ ವ್ಯವಹಾರವನ್ನು ನಡೆಸಬಹುದು ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಅಕೌಂಟೆಂಟ್, ಖರೀದಿ, ಮಾರಾಟ, ಖರ್ಚುವೆಚ್ಚ ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಸರ್ಕಾರದಿಂದ ಉಚಿತ ಸಾಫ್ಟ್‍ವೇರ್ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.  ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ತೆರಿಗೆ ಮಂಡಳಿ ಮುಖ್ಯಸ್ಥ ಬಿ.ಟಿ.ಮನೋಹರ್, ಯಾವ ವಸ್ತುಗಳ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ. ಜಿಎಸ್‍ಟಿ ಬಗ್ಗೆ ಡಿಡಿಡಿ.್ಚಚಿಛ್ಚಿ.ಜಟq.ಜ್ಞಿ ವೆಬ್‍ಸೈಟ್‍ಗೆ ಭೇಟಿ ಮಾಡಿದರೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin