ಜಿಟಿಜಿಟಿ ಮಳೆಯ ನಡುವೆಯೂ ಮೆರಗು ಕಳೆದುಕೊಳ್ಳದ ಮೈಸೂರು ದಸರಾ

ಈ ಸುದ್ದಿಯನ್ನು ಶೇರ್ ಮಾಡಿ

Dasara-01

ಮೈಸೂರು,ಸೆ.25- ನಾಡಹಬ್ಬ ದಸರಾ ವೈಭವ ಮತ್ತಷ್ಟು ರಂಗೇರಿದೆ. ಲಕ್ಷಾಂತರ ಪ್ರವಾಸಿಗರ ಸಮೂಹ ಹರಿದುಬರುತ್ತಿದೆ. ಭಾನುವಾರ ಸಾಂಸ್ಕøತಿಕ ನಗರಿಯಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಸಾರ್ವಜನಿಕರು, ಪ್ರೇಕ್ಷಕರು, ಪ್ರವಾಸಿಗರು ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು.
ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಹಲವು ಕಡೆ ಕಾರ್ಯಕ್ರಮಗಳು ನಡೆದವು. ಕೆಲವು ಕಾರ್ಯಕ್ರಮಗಳು ತಡವಾಗಿ ಆರಂಭವಾದರೂ ಜನರು ಮಾತ್ರ ಕೊಂಚವೂ ಬೇಸರಪಡದೆ ವೀಕ್ಷಿಸಿದರು.

Dasarav-3

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾಕ್ಕೆ ವೀಕ್ಷಣೆಗೆ ಪೆಂಡಾಲ್ ಹಾಕಿಲ್ಲವಾದರೂ ನಡುವೆಯೇ ಕಾರ್ಯಕ್ರಮ ವೀಕ್ಷಿಸಿದರು. ಯುವ ದಸರಾದ ಸಂಗೀತ ಕಾರ್ಯಕ್ರಮದಲ್ಲಿ ಅಸ್ಸಾಂನ ಖ್ಯಾತ ಸಂಗೀತ ಸಂಯೋಜಕ ಅಂಗರಾಗ್ ಮಹೋತ ನೇತೃತ್ವದ ಪಾಪನ್ ಫ್ಲೋಕ್-ಫ್ಯೂಜನ್ ಬ್ಯಾಂಡ್ ತಂಡವು ಪ್ರೇಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು.  ಇನ್ನು ಅರಮನೆ ಸಾಂಸ್ಕøತಿಕ ವೇದಿಕೆಯಲ್ಲಿ ಪಂಡಿತ್ ಡಾ.ರಾಜೀವ್ ತಾರನಾಥ್ ಅವರ ಸರೋದ್ ವಾದಕ್ಕೆ ಸಂಗೀತ ಪ್ರೀಯರು ತಲೆದೂಗಿದರು. ದಸರಾ ಮಹೋತ್ಸವದ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಹೃದಯಗಳಿಗೆ ಲಗ್ಗೆಹಾಕಿತು.

Dasarav-2

ಟ್ರಿಣ್ ಟ್ರಿಣ್ ಸೈಕಲ್‍ಗೆ ಚಾಲನೆ:

ಮೈಸೂರಿನ ದಿವಾನ್ ರಂಗಚಾರ್ಲು ಪುರಭವನದ ಮುಂಭಾಗ ಜಿಲ್ಲಾಧಿಕಾರಿ ರಂದೀಪ್ ಟ್ರಿಣ್ ಟ್ರಿಣ್ ಸೈಕಲ್ ಸವಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ವಾಹನ ಸಂಚಾರ ದಟ್ಟಣೆ ಮಾಡುವ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೈಕಲ್ ಉಪಯೋಗಿಸಬೇಕು. ತಾತ್ಕಾಲಿಕವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಒಂದು ದಿನ, ಮೂರು ದಿನ, ಒಂದು ವಾರ ಹಾಗೂ ಒಂದು ತಿಂಗಳ ಅವಧಿಗೆ ಈ ಯೋಜನೆಯಡಿ ನೊಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಯುವಕರು ಸೈಕಲ್ ಏರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಸಿದ್ದ ಸ್ಥಳಗಳನ್ನು ವೀಕ್ಷಿಸಿದರು.

Dasara-4

Facebook Comments

Sri Raghav

Admin