ಜಿಡಿಪಿ ಕುಸಿತ : ಕೇಂದ್ರ ಸರ್ಕಾರಕ್ಕೆ ರಾಹುಲ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul

ನವದೆಹಲಿ, ಜೂ. 1-ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ) ಕುಸಿತ ಕಂಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ವೈಫಲ್ಯದ ಗಮನವನ್ನು ಬೇರೆಡೆ ತಿರುಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.   ಜಿಡಿಪಿ ಕುಸಿತಗೊಂಡಿದೆ, ನಿರುದ್ಯೋಗ ಹೆಚ್ಚಳವಾಗಿದೆ. ಇಷ್ಟೆಲ್ಲಾ ಮೂಲಭೂತ ವೈಫಲ್ಯಗಳಿಂದ ಹಿನ್ನೆಡೆಯಾಗಿರುವ ಸರ್ಕಾರವು ಈ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಅವರು ಟ್ವೀಟ್‍ನಲ್ಲಿ ಟೀಕಿಸಿದ್ದಾರೆ.ಮೂರು ವರ್ಷಗಳ ಬಳಿಕ ದೇಶದ ಆರ್ಥಿಕ ಪ್ರಗತಿ ಅನಿರೀಕ್ಷಿತವಾಗಿ ತೀರಾ ಕೆಳಮಟ್ಟಕ್ಕೆ ಕುಸಿದಿದ್ದು, ನೋಟು ಅಪನಗದೀಕರಣದ ನಂತರ ಜಿಡಿಪಿ ಶೇ. 7.1ರಷ್ಟು ಇಳಿಕೆಯಾಗಿ, 4ನೇ ತ್ರೈಮಾಸಿಕ ಅವಧಿಯಲ್ಲಿ ಪ್ರತಿಶತ 6.1ರಷ್ಟು ತಗ್ಗಿದೆ ಎಂದು ಕೇಂದ್ರ ಸಾಂಖ್ಯಿಕ ಕಾರ್ಯಾಲಯ ವರದಿ ಬಿಡುಗಡೆ ಮಾಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin