ಜಿಪಂ ಅಧ್ಯಕ್ಷರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಇಲಾಖೆ

ಈ ಸುದ್ದಿಯನ್ನು ಶೇರ್ ಮಾಡಿ

Zilla

ಬೆಂಗಳೂರು, ಅ.1- ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಭರ್ಜರಿ ಗಿಫ್ಟ್ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಹೊಸ ನಿಯಮದಂತೆ ಇನ್ಮುಂದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು 16 ಲಕ್ಷಕ್ಕೆ ಮೀರದಂತೆ ತಮ್ಮ ವಾಹನ ಖರೀದಿ ಮಾಡಬಹುದಾಗಿದೆ. ಈ ಹಿಂದೆ ಈ ಮಿತಿಯನ್ನು 11 ಲಕ್ಷಕ್ಕೆ ನಿಗದಿ ಪಡಿಸಲಾಗಿತ್ತು. ಇದಲ್ಲದೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧ್ಯಕ್ಷ ಹಾಗೂ ಸಂಬಳ ಮತ್ತು ಭತ್ಯೆ ತಿದ್ದುಪಡಿ ನಿಯಮಗಳು 2016ಕ್ಕೆ ಅಂತಿಮ ಅಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಇನ್ನು 2011ರಲ್ಲಿ ಜಿಪಂ ಅಧ್ಯಕ್ಷರ ಕಾರು ಖರೀದಿಗೆ 11 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು.

ಆದರೆ ಪ್ರಸ್ತುತ ವಾಹನದ ದರ ಏರಿಕೆಯಾಗಿದ್ದರಿಂದ ವಾಹನ ಖರೀದಿಗೆ ಹಣ ಏರಿಕೆ ಮಾಡುವಂತೆ ಹಲವು ಜಿಪಂ ಅಧ್ಯಕ್ಷರು ಮನವಿ ಮಾಡಿದ್ದರು. ಹೀಗಾಗಿ ಮನವಿ ಪರಿಶೀಲಿಸಿದ ಇಲಾಖೆ ಅನುದಾನದಲ್ಲಿ ಏರಿಕೆ ಮಾಡಿದೆ. ಅಲ್ಲದೇ ಅಂತಿಮ ಅಸೂಚನೆಯಲ್ಲಿ ಬೆಂಗಳೂರು ಸೇರಿದಂತೆ ಇತರೇ ಪ್ರದೇಶಗಳಲ್ಲಿ ಮನೆ ಬಾಡಿಗೆ ದರವನ್ನು ಏರಿಸುವುದಕ್ಕೂ ಅನುಮತಿ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin