ಜಿಮ್ನಾಸ್ಟಿಕ್ ಪಟು ದೀಪಾಗೆ ನಾಳೆ ಅಗ್ನಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

fsdahadfhdfh

ರಿಯೋ ಡಿ ಜನೈರೋ, ಆ.6- ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಪ್ರಪ್ರಥಮ ಮಹಿಳಾ ಜಿಮ್ನಾಸ್ಟಿಕ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಾ ಕರ್ಮಕರ್‍ಗೆ ನಾಳೆ ಅಗ್ನಿ ಪರೀಕ್ಷೆ..!  ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತೆ ಪಡೆದ ಭಾರತದ ಭರವಸೆ ತಾರೆಯಾಗಿ ಹೊರಹೊಮ್ಮಿರುವ 22 ವರ್ಷದ ದೀಪಾ, ನಾಳೆ ತಮ್ಮ ಸಾಮಥ್ರ್ಯ ಸಾಬೀತು ಮಾಡಬೇಕಿದೆ.  ಈಶಾನ್ಯ ಭಾರತದ ತ್ರಿಪುರದ ಈಕೆ ನಾಳೆ ಡಬ್ಬಲ್ ಫ್ರಂಟ್ ಸೊಮರ್ ಸಾಲ್ಟ್ ವಾಲ್ಟ್‍ನಲ್ಲಿ ಜಗತ್ತಿನ ಪ್ರಬಲ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲಿದ್ದಾರೆ. ಈಗಾಗಲೇ ಜಿಮ್ನಾಸ್ಟಿಕ್‍ನಲ್ಲಿ ಕಠಿಣ ಅಭ್ಯಾಸ ನಡೆಸಿ ಪರಿಪೂರ್ಣವಾಗಿ ತಯಾರಿಯಾಗಿರುವ ದೀಪಾ ಭಾರತದ ಪದಕ ಬೇಟೆಯ ಭರವಸೆಯ ಬೆಳಕಾಗಿದ್ದಾರೆ.

Rio Olympics 2016: Dipa Karmakar carrying Indian hopes in gymnastic

Facebook Comments

Sri Raghav

Admin