ಜಿಯೊ ಗ್ರಾಹಕರಿಗೊಂದ ಗುಡ್ ನ್ಯೂಸ್ :  2017ರ ಮಾರ್ಚ್ ವರೆಗೆ ಉಚಿತ ಕರೆ, ಇಂಟರ್ನೆಟ್ …!

ಈ ಸುದ್ದಿಯನ್ನು ಶೇರ್ ಮಾಡಿ

Jio-01

ಮುಂಬೈ.ಅ.24 : ದೇಶದ ಟೆಲಿಕಾಂ ವಲಯದಲ್ಲಿ ಕ್ರಾಂತಿಯ ಅಲೆಯನ್ನೇ ಹುಟ್ಟುಹಾಕಿದ್ದ ರಿಲಯನ್ಸ್ ಜಿಯೊ ಕುರಿತು ದಿನಕ್ಕೊಂದು ಹೊಸ ಸುದ್ದಿ ಬರುತ್ತಲೇ ಇವೆ. ಈಗ ಬಂದಿರುವ ಸಂತಸದ ಸುದ್ದಿಯೇನೆಂದರೆ, ರಿಲಯನ್ಸ್  31ರ ವರೆಗೆ ವೆಲ್ ಕಂ ಆಫರ್ ಕೊನೆಯಾಗುತ್ತೆ ಎನ್ನಲಾಗಿತ್ತು. ಆದರೆ ಈಗ ಈ ಆಫರ್ ಮೊದಲೇ ಹೇಳಿದಂತೆ ಡಿ.31 ರ ವರೆಗೆ ಅನ್ವಯವಾಗಲಿದೆಯಂತೆ. ಅಷ್ಟೇ ಅಲ್ಲ ಈ ವೆಲ್ ಕಮ್ ಆಫರ್ ಮಾರ್ಚ್ 2017 ರ ವರೆಗೂ ಮುಂದುವರೆಯಲಿದೆಯಂತೆ, ಜಿಯೋ ಹೊಸದಾಗಿ ಕಾರ್ಯಾರಂಭಿಸಿದ ಸಲುವಾಗಿ 2016 ಡಿಸೆಂಬರ್ 31ರ ವರೆಗೆ ವೆಲ್ ಕಂ ಆಫರ್ ಘೋಷಿಸಿತ್ತು. ಇದರಲ್ಲಿ ಉಚಿತ ಕನೆಕ್ಷನ್, ಉಚಿತ ಡೇಟಾ ಮತ್ತು ಉಚಿತ ಕರೆ ಮಾಡಬಹುದಾಗಿತ್ತು. ಆದರೆ  ಟ್ರಾಯ್ ನಿಯಮದ ಪ್ರಕಾರ ಯಾವುದೇ ಟೆಲಿಕಾಂ ಸಂಸ್ಥೆ 90 ದಿನಗಳಿಗಿಂತ ಹೆಚ್ಚು ಉಚಿತ ಸೇವೆ ನೀಡುವಂತಿಲ್ಲ ಹಾಗಾಗಿ ಡಿ.3 ಕ್ಕೆ ಈ ಆಫರ್ ಮುಗಿಯುತ್ತೆ ಎನ್ನಲಾಗಿತ್ತು.

ಆದರೆ ಡಿಸೆಂಬರ್ ನಂತರ ಈ ಆಫರ್ ನ್ನು ಜಿಯೊ ಮತ್ತೆ ಮುಂದುವರಿಸಬುದಾಗಿದ್ದು ಇದಕ್ಕೆ ಟ್ರಾಯ್ ಅನುಮತಿ ಬೇಕಾಗಿಲ್ಲ ಎನ್ನಲಾಗಿದೆ. 100 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯಿಟ್ಟುಕೊಂಡಿರುವ ರಿಲಾಯನ್ಸ್ ತನ್ನ ಗುರಿ ತಲುಪಲು 2017 ರ ಮಾರ್ಚ ವರೆಗೂ ಉಚಿತ ಕರೆ ಮತ್ತು ಇಂಟರ್ನೆಟ್ ಸೇವೆಯನ್ನು ಮುಂದುವರಿಸಲಿದೆ ಎನ್ನಲಾಗಿದೆ.

ಆದರೆ ಸದ್ಯ ಜಿಯೋ ವೆಲ್ ಕಮ್ ಆಫರ್ ಡಿಸೆಂಬರ್ 3ಕ್ಕೆ ಕೊನೆಗೊಳ್ಳುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಸತ್ಯವಲ್ಲ, ಬಳಕೆದಾರರೇ ಹೆದರಬೇಡಿ ವೆಲ್ ಕಂ ಆಫರ್ ಕೊನೆಯಾಗುವುದು ಡಿ.31ಕ್ಕೆ. ಅಲ್ಲಿಯವರೆಗೂ ಉಚಿತ ಡೇಟಾ, ಕರೆ ಇದ್ದೇ ಇರುತ್ತೆ ಎನ್ನಲಾಗಿದೆ. ಈ ನಡುವೆ ಮಾರ್ಚ 2017 ವರೆಗೂ ಉಚಿತ ಸೇವೆ ನೀಡಲಾಗುತ್ತೆ ಎನ್ನುವ ಸುದ್ದಿ ಜಿಯೋ ಗ್ರಾಹಕರ ಸಂತೋಷವನ್ನು ಇಮ್ಮಡಿಗೊಳಿಸಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin