ಜಿಯೋಗೆ ಆರಂಭದಲ್ಲೇ ವಿಘ್ನ : ಸ್ಮಾರ್ಟ್‍ಫೋನ್ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

LYF

ನವದೆಹಲಿ, ಸೆ.8- ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ದೈತ್ಯ ಸಂಸ್ಥೆಗಳಾದ ಏರ್‍ಟೆಲ್, ಐಡಿಯಾ ಸೇರಿದಂತೆ ಅನೇಕ ಕಂಪೆನಿಗಳಿಗೆ ಸಡ್ಡು ಹೊಡೆದು ಗ್ರಾಹಕರಿಗೆ ಬಿಗ್ ಆಫರ್ ನೀಡಿ ತನ್ನ ಕಡೆ ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಸಂಸ್ಥೆಯ ಜಿಯೋ ಮೊಬೈಲ್ ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿರುವ ಗ್ರಾಹಕರಿಗೆ ಇಲ್ಲೊಂದು ಕಹಿ ಸುದ್ದಿ ಇದೆ.
ರಿಲಾಯನ್ಸ್ ಜಿಯೋ ಲೈಫ್ ವಾಟರ್-1 ಸ್ಮಾರ್ಟ್‍ಫೋನ್ ಸ್ಫೋಟಗೊಂಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಿಯೋ ಸ್ಮಾರ್ಟ್ ಫೋನ್ ಕೈನಲ್ಲಿದ್ದಾಗ ದಿಢೀರ್ ಸ್ಫೋಟಗೊಂಡಿದೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ. ಅಲ್ಲದೆ, ಮೊಬೈಲ್ ಸ್ಫೋಟಗೊಂಡ ಫೋಟೋಗಳನ್ನು ತನ್ನ ಫೇಸ್‍ಬುಕ್ ಖಾತೆಗೆ ಹಾಕಿಕೊಂಡಿದ್ದಾನೆ. ಈ ಕುರಿತು ರಿಲಾಯನ್ಸ್ ಸಂಸ್ಥೆ ಪ್ರತಿಕ್ರಿಯೆ ನೀಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin